‘ಕಾಶ್ಮೀರದಲ್ಲಿ ಮುಗ್ಧರ ಹತ್ಯೆ’, ಅಫ್ರಿದಿ ಟ್ವೀಟ್ : ತಿರುಗೇಟು ನೀಡಿದ ಗಂಭೀರ್ ಹೇಳಿದ್ದೇನು..?

ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ ಕಾಶ್ಮೀರ ಗಡಿ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಭಾರತ ದಬ್ಬಾಳಿಕೆ ನಡೆಸುತ್ತಿದ್ದು, ಮುಗ್ಧ ಜನರನ್ನು ಕೊಂದು ಕಾಶ್ಮೀರಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಎಡಗೈ ಬ್ಯಾಟ್ಸಮನ್ ಗೌತಮ್ ಗಂಭೀರ್ ಟ್ವೀಟ್ ಮಾಡುವ ಮೂಲಕ ಪಾಕ್ ಆಟಗಾರನಿಗೆ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಕ್ರಿಕೆಟರ್ ಶಾಹಿದ್ ಅಫ್ರಿದಿ ‘ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮುಗ್ಧ ನಾಗರಿಕರ ಮೇಲೆ ನಡೆಯುತ್ತಿರುವ ಗುಂಡಿನ ದಾಳಿ, ಹಿಂಸಾಚಾರ ಪ್ರಕರಣಗಳು ನಿಜಕ್ಕೂ ಚಿಂತಾಜನಕವಾಗಿದೆ. ಭಾರತದ ದಬ್ಬಾಳಿಕೆಯ ಸರ್ಕಾರ ಸ್ವಾತಂತ್ರ್ಯ ಬಯಸುವ ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ. ಕಾಶ್ಮೀರದಲ್ಲಿ ರಕ್ತಪಾತವನ್ನು ನಿಲ್ಲಿಸಲು ಯುನೈಟೆಡ್ ನೇಶನ್ಸ್ (UN) ಹಾಗೂ ಇನ್ನಿತರ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳ ಏಕೆ ಮುಂದಾಗುತ್ತಿಲ್ಲ ಎಂಬುದೇ ಆಶ್ಚರ್ಯ ಮೂಡಿಸುತ್ತಿದೆ ‘ ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್ ‘ ಕಾಶ್ಮೀರ ಬಗ್ಗೆ ಅಫ್ರಿದಿ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಲು ಮೀಡಿಯಾ ನನ್ನನ್ನು ಆಹ್ವಾನಿಸಿದೆ. ಇದರಲ್ಲಿ ಹೇಳೋದೇನಿದೆ..? ಶಾಹಿದ್ ಅಫ್ರಿದಿ ಅವರ ಶಬ್ದಕೋಶದಲ್ಲಿ UN ಎಂಬುದರ ವಿಸ್ತ್ರತ ರೂಪ Under Ninteen ಆಗಿದೆ. ಅಫ್ರಿದಿ ಹೇಳಿಕೆ ಕುರಿತು ಮೀಡಿಯಾದವರು ತಲೆ ಕೆಡಿಸಿಕೊಳ್ಳದೇ ಆರಾಮಾಗಿರಿ. ಅಫ್ರಿದಿ ನೋ ಬಾಲ್ ಎಸೆತದಲ್ಲಿ ವಿಕೆಟ್ ಪಡೆದು ಸೆಲೆಬ್ರೇಟ್ ಮಾಡುತ್ತಿದ್ದಾರೆ ಅಷ್ಟೇ ‘ ಎಂದಿದ್ದಾರೆ.

Leave a Reply

Your email address will not be published.