ಬಿಜೆಪಿಯವರದ್ದು ವಾಮಮಾರ್ಗ, ನಮ್ಮದು ರಾಜಮಾರ್ಗ : ಎಚ್. ಆಂಜನೇಯ

ಸಿಎಂ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಗ್ರಾ.ಪಂ ಸದಸ್ಯರು, ಮುಖಂಡರ ಖರೀದಿ ಬಗ್ಗೆ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಆರೋಪಕ್ಕೆ ಆಂಜನೇಯ ತಿರುಗೇಟು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ  ಹೇಳಿಕೆ ನೀಡಿದ್ದಾರೆ.

‘ ಜನರನ್ನು ಖರೀದಿಸಲು ಅವರು ದನಕರುಗಳಲ್ಲ. ಜನರಿಗೂ ಸ್ವಾಭಿಮಾನ, ಆತ್ಮ ಗೌರವ ಇದೆ. ಕಾಂಗ್ರೆಸ್ ಜನರನ್ನು ಬರಮಾಡಿಕೊಳ್ಳುತ್ತದೆ. ಬಿಜೆಪಿಯಂತೆ ನಾವು ಆಪರೇಷನ್ ಕಮಲ ಮಾಡಲ್ಲ ‘ ಎಂದು ಹೇಳಿದ್ದಾರೆ.

‘ ಬಿಜೆಪಿಯವರು ಶಾಸಕರನ್ನೆಲ್ಲಾ ಬಹಿರಂಗವಾಗಿ ಕೂಗಿಕೊಂಡು ಹರಾಜಾಕಿದರು. ಪಕ್ಷಕ್ಕೆ ಸೇರಿಕೊಂಡು ಮಂತ್ರಿ ಮಾಡಿದರು. ಬಿಜೆಪಿಯಂತೆ ನಮ್ಮದು ವಾಮ ಮಾರ್ಗ ಅಲ್ಲ, ನಮ್ಮದು ರಾಜಮಾರ್ಗ’ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com