ಪದ್ಮಭೂಷಣ ಸ್ವೀಕರಿಸಿದ ಬಳಿಕ ಧೋನಿ ವಿಶೇಷ ಸಂದೇಶ : ಸೇನೆಯ ಬಗ್ಗೆ MSD ಹೇಳಿದ್ದೇನು..?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಗೌರವವನ್ನು ಭಾನುವಾರ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಧೋನಿ ಲೆಫ್ಟಿನೆಂಟ್ ಕರ್ನಲ್ ವೇಷ ಧರಿಸಿ ಬಂದಿದ್ದರು. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿರುವ ಧೋನಿ, ಸೇನೆಯ ಬಗ್ಗೆ ವಿಶೇಷ ಸಂದೇಶವನ್ನು ಬರೆದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಪಡೆದ ಫೋಟೊ ಪೋಸ್ಟ್ ಮಾಡಿರುವ ಧೋನಿ ‘ ಸೇನೆಯ ಸಮವಸ್ತ್ರ ಧರಿಸಿ ಪದ್ಮಭೂಷಣ ಸ್ವೀಕರಿಸುವುದು 10 ಪಟ್ಟು ಉತ್ಸಾಹದಾಯಕವಾಗಿರುತ್ತದೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಪುರುಷರು, ಮಹಿಳೆಯರಿಗೆ ಅವರ ಕುಟುಂಬದವರಿಗೆ ನನ್ನ ಧನ್ಯವಾದಗಳು. ಅವರ ತ್ಯಾಗದ ಕಾರಣದಿಂದಲೇ ನಾವು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಜೈ ಹಿಂದ್ ‘ ಎಂದು ಬರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com