ಕುಕ್ಕರ್‌, ಗ್ಯಾಸ್‌ ಆಯ್ತು…ಈಗ ಮಹಿಳೆಯರನ್ನು ಸೆಳೆಯಲು BJP ಅಭ್ಯರ್ಥಿಯಿಂದ ಪ್ಯಾಡ್‌ ವಿತರಣೆ !

ಬೆಳಗಾವಿ : ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜಕೀಯ ನಾಯಕರು ಮಾತ್ರ ಇನ್ನೂ ಮತದಾರರಿಗೆ ಆಮಿಷವೊಡ್ಡತ್ತಲೇ ಇದ್ದಾರೆ. ಇಷ್ಟು ದಿನ ಗ್ಯಾಸ್‌ ಸ್ಟವ್‌, ಕುಕ್ಕರ್‌, ಐರನ್‌ ಬಾಕ್ಸ್‌ ನೀಡುತ್ತಿದ್ದರು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗೆ ಪ್ಯಾಡ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಬೆಳಗಾವಿಯ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್‌ ಬೆವಕೆ ಬೆಂಬಲಿಗರು ಟಿಕೆಟ್‌ ಹಂಚಿಕೆ ಮಾಡಿದ್ದು, ಮಹಿಳೆಯರು ಮುಜುಗರಕ್ಕೀಡಾಗಿದ್ದು, ಶ್ರೀನಗರ ಗಾರ್ಡನ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅನಿಲ್‌ ಬೆನಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

Leave a Reply

Your email address will not be published.