ಕುಡಿಯುವ ನೀರಿಗೂ ತಟ್ಟಿದ ನೀತಿ ಸಂಹಿತೆ ಬಿಸಿ : ನೀರಿನ ಘಟಕಕ್ಕೆ ಬೀಗ ಜಡಿದ ಅಧಿಕಾರಿಗಳು !

ಚಿಕ್ಕಬಳ್ಳಾಪುರ : ಶುದ್ದ ಕುಡಿಯುವ ನೀರಿನ ಘಟಕಕ್ಕೂ ನೀತಿ ಸಂಹಿತೆಯ ಬಿಸಿ ತಟ್ಟಿದ್ದು, ಕುಡಿಯುವ ನೀರಿನ ಘಟಕಕ್ಕೆ ಚುನಾವಣಾ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಚುನಾವಣಾ ನೀತಿ ಸಂಹಿತೆ ಇದ್ದರೂ ಸ್ಥಳಿಯ ಶಾಸಕರ ಭಾವಚಿತ್ರ ತೆರವುಗೊಳಿಸದೆ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ನೀರಿನ ಘಟಕವನ್ನು ಸೀಜ್‌ ಮಾಡಿ ನೋಟೀಸ್ ನೀಡಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಿದ್ದು, ಇದನ್ನು ವಿರೋಧಿಸಿ ಸಾರ್ವಜನಿಕರ ಪ್ರತಿಭಟನೆ ನಡೆಸುತ್ತಿದ್ದಾರೆ. ನೀತಿ ಸಂಹಿತೆ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಆರೋಪಿಸಲಾಗಿದ್ದು, ಸ್ಥಳಿಯ ಶಾಸಕ ಸುಧಾಕರ್ ಮೇಲಿನ ಸೇಡಿಗಾಗಿ ವಿರೋಧ ಪಕ್ಷದ ನಾಯಕರ ಕುತಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಖಾಲಿ ಕೊಡ ಹಿಡಿದು ಘಟಕದೆದುರುಮ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com