ರಾಜಕೀಯ ಆರಂಭಿಸಿದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ CM ಅಂತ್ಯವಾಗುತ್ತೆ : HDK ಭವಿಷ್ಯ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಬಹಳಷ್ಟು ಮುಖಂಡರು ಜೆಡಿಎಸ್ ಸೇರಿದ್ದಾರೆ. ಒಕ್ಕಲಿಗ ಸಮಾಜದ ಕೆಲವು ಮುಖಂಡರನ್ನು ಛೂ ಬಿಟ್ಟು ನಮ್ಮ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಜಾತಿ ಮುಖಂಡರನ್ನು ಬಿಟ್ಟು ಒಡೆದು ಆಳುವ ನೀತಿ ಅನುಸರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ವರುಣಗೆ ಹೋದ ಸಿದ್ದರಾಮಯ್ಯ ಪಲಾಯನವಾದಿ. ಈಗ ಮತ್ತೆ ಇದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಮತ್ತೆ ಪಲಾಯನ ಮಾಡುತ್ತಿದ್ದಾರೆ. ಮಗನಿಗೆ ದಾರಿ ಮಾಡಿಕೊಡಲು ವರುಣ ಬಿಟ್ಟು ಚಾಮುಂಡೇಶ್ವರಿಗೆ ಬಂದಿರುವುದಾಗಿ ಆರೋಪಿಸಿದ್ದಾರೆ.
ಡಿಸಿ ಮೇಲೆ ಹಲ್ಲೆ ಮಾಡಿದ ವಿಚಾರ ಸಂಬಂಧ ಮಾತನಾಡಿದ ಅವರು, ಮರಿಗೌಡ ನನಗೆ ಗೊತ್ತಿಲ್ಲ ಅಂತ ಹೇಳಿದ ಸಿದ್ದರಾಮಯ್ಯ ಈಗ ಅದೇ ಮರಿಗೌಡನನ್ನು ಬಾಡಿಗಾರ್ಡ್ ಆಗಿ ಮಾಡಿಕೊಂಡು ತಿರುಗುತ್ತಿದ್ದಾರೆ. ರಾಜಕೀಯ ಆರಂಭ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯನ ಅಂತ್ಯ ಆಗುತ್ತದೆ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಬ್ಬರೂ ಮನೆಗೆ ಹೋಗುವುದು ನಿಶ್ಚಿತ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com