ರಾಜರಥ ಸಿನಿಮಾ ನೋಡದವರು ಕಚಡಾ ನನ್ಮಕ್ಕಳು ಹೇಳಿಕೆ : ಕ್ಷಮೆ ಕೋರಿದ ಭಂಡಾರಿ ಬ್ರದರ್ಸ್‌

ನಮ್ಮ ರಾಜರಥ ಸಿನಿಮಾ ನೋಡದವರು ಕಚಡಾ ನನ್ಮಕ್ಕಳು ಎಂದು ವೀಕ್ಷಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜರಥ ಸಿನಿಮಾದ ನಿರ್ದೇಶಕ ಅನೂಪ್‌ ಭಂಡಾರಿ ಹಾಗೂ ನಾಯಕ ನಟ ನಿರೂಪ್‌ ಭಂಡಾರಿ ಪ್ರೇಕ್ಷಕರ ಕ್ಷಮೆ ಯಾಚಿಸಿದ್ದಾರೆ.
ಆರ್‌. ಜೆ ರ್ಯಾಪಿಡ್‌ ರಶ್ಮಿ ನಡೆಸಿಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಅನೂಪ್‌, ನಿರೂಪ್‌ ಹಾಗೂ ನಟಿ ಅವಂತಿಕಾ ಶೆಟ್ಟಿ, ರಾಜರಥ ಸಿನಿಮಾ ನೋಡದವರು ಕಚಡಾ ನನ್ಮಕ್ಕಳು ಎಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಇವರ ವಿರುದ್ದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.


ಈ ಕುರಿತು ಭಂಡಾರಿ ಬ್ರದರ್ಸ್ ಕ್ಷಮೆ ಯಾಚಿಸಿದ್ದು, ರಾಜರಥ ಸಿನಿಮಾ ಬಿಡುಗಡೆಗೂ ಮುನ್ನ ಭಾಗವಹಿಸಿದ ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ಇದಾಗಿದ್ದು, ಇದರಲ್ಲಿ ನಾವಾಡಿರುವ ಮಾತಿಗೆ ಕ್ಷಮೆ ಕೋರುತ್ತೇವೆ. ಈ ಸಂದರ್ಶನ ಆರಂಭದಲ್ಲಿ ಒಳ್ಳೆಯ ಕನ್ನಡ ಸಿನಿಮಾ ಬಂದರೂ ಯಾರೂ ಕನ್ನಡ ಸಿನಿಮಾ ನೋಡುವುದಿಲ್ಲ ಎಂಬ ಚರ್ಚೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ನಾವು ಉತ್ತರ ಕೊಟ್ಟಿದ್ದೆವು. ಕನ್ನಡ ಗೊತ್ತಿದ್ದರೂ ಕನ್ನಡ ಸಿನಿಮಾ ನೋಡದವರ ಬಗ್ಗೆ ಈ ರೀತಿ ಹೇಳಿದ್ದೆವು. ಆದರೆ ಕನ್ನಡದ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತು ಇದಲ್ಲ. ಇಂದು ಯಾವುದೇ ಯಶಸ್ಸು ಸಿಕ್ಕಿದ್ದರೂ ಅದು ಕನ್ನಡವರಿಂದ ಮಾತ್ರ ಎಂದು ಅನೂಪ್‌ ಬಂಡಾರಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಈ ಬಗ್ಗೆ ನಿರೂಪ್‌ ಭಂಡಾರಿ ಸಹ ಪ್ರತಿಕ್ರಿಯಿಸಿದ್ದು. ಕನ್ನಡ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ನಮಗೆ ಅಪಾರ ಅಭಿಮಾನವಿದೆ. ಅದಕ್ಕಾಗಿಯೇ ಪ್ರತೀ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ.ಕಾರ್ಯಕ್ರಮದಲ್ಲಿ ನಾವು ಆಡಿದ ಮಾತು ತಪ್ಪಾಗಿದೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇವೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ ನಿಮ್ಮ ಆಶಿರ್ವಾದ ನಮ್ಮ ಮೇಲಿರಲಿ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com