ಭಿಕ್ಷುಕರಿಗೂ ಮತದಾನದ ಹಕ್ಕು ನೀಡಿ : ಚುನಾವಣಾ ಆಯೋಗಕ್ಕೆ “ದಾರಿ” ಪತ್ರ

ಮಂಗಳೂರು : ಬೀದಿಯಲ್ಲಿ ಭಿಕ್ಷೆ ಬೇಡೋ ಭಿಕ್ಷುಕರಿಗೆ ಮತದಾನದ ಹಕ್ಕು ಕೊಡಬೇಕಂತೆ. ಹೌದು ಹೀಗಂತ ಮಂಗಳೂರಿನ ಡೆಮಾಕ್ರಟಿಕ್ ಅಂಬಾಸಿಡರ್ ಫಾರ್ ಆಲ್ ಇಂಡಿಯಾ ರೂರಲ್ ಇನ್ಟರ್ಗ್ರಿಟಿ ( ದಾರಿ ) ಸಂಘಟನೆ, ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಆಯೋಗವು, ಭಿಕ್ಷುಕರಿಗೆ ಮನೆ ಇಲ್ಲ ಎಂಬ ಕಾರಣಕ್ಕೆ ಮತದಾನದ ಹಕ್ಕನ್ನು ನಿರಾಕರಿಸುತ್ತದೆ. ಮನೆ ಇದ್ದವರು ಭಿಕ್ಷುಕರಾಗ್ತಾರಾ ಎಂದು ಪ್ರಶ್ನಿಸಿರೋ ದಾರಿ‌ ಸಂಘಟನೆ, ಭಿಕ್ಷುಕರಿಗೆ ಮತದಾನದ ಹಕ್ಕು ನೀಡುವವರೆಗೂ ಮತದಾನ ಸ್ಥಗಿತಗೊಳಿಸಬೇಕು ಎಂದೂ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.‌ ದಾರಿ ಬರೆದ ಪತ್ರಕ್ಕೆ ಆಯೋಗದಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published.