10 ವರ್ಷಗಳ ನಂತರ ನಡೆಯಲಿದೆ ಅಪರೂಪ : ಇದು IPL-2018 ವಿಶೇಷತೆ..!

ಏಪ್ರಿಲ್ 7 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಆರಂಭವಾಗುತ್ತಿದೆ. ಭಾರತದ ಪ್ರತಿಷ್ಟಿತ ಚುಟುಕು ಸಮರವಾಗಿರುವ ಐಪಿಎಲ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು ಟ್ರೋಫಿ ಗೆಲ್ಲಲು ಸೆಣಸಾಡಲಿವೆ.

ಈ ಬಾರಿಯ ಐಪಿಎಲ್ ನಲ್ಲಿ ಕಳೆದ 9 ವರ್ಷಗಳಲ್ಲಿ ನಡೆದಿರದ ಒಂದು ಅಪರೂಪದ ವಿಶೇಷತೆಯಿದೆ. ಅದೇನೆಂದರೆ ಟೂರ್ನಿಯಲ್ಲಿ ಭಾಗವಹಿಸಲಿರುವ 8 ತಂಡಗಳ ಪೈಕಿ 7 ತಂಡಗಳ ನಾಯಕರು ಭಾರತೀಯ ಆಟಗಾರರೇ ಆಗಿದ್ದಾರೆ. ಸನ್ ರೈಸರ್ಸ್ ಹೊರತು ಪಡಿಸಿ ಉಳಿದೆಲ್ಲ ತಂಡದ ನಾಯಕರು ಟೀಮ್ ಇಂಡಿಯಾ ಕ್ರಿಕೆಟಿಗರೇ ಆಗಿದ್ದಾರೆ. 2008 ರಲ್ಲಿ ನಡೆದ ಮೊದಲ ಸೀಸನ್ ನಲ್ಲಿ ಮಾತ್ರ ಇದು ನಡೆದಿತ್ತು.

Image result for kohli rohith dhoni IPL 2018

2008 ನ್ನು ಹೊರತು ಪಡಿಸಿ, ಎಲ್ಲ ಐಪಿಎಲ್ ಸೀಸನ್ ಗಳಲ್ಲಿ ಕನಿಷ್ಟ ಎರಡು ತಂಡಗಳಿಗೆ ವಿದೇಶಿ ಆಟಗಾರರು ನಾಯಕರಾಗಿದ್ದರು. ಆದರೆ ಈ ಬಾರಿ ಸನ್ ರೈಸರ್ಸ್ ತಂಡಕ್ಕೆ ಮಾತ್ರ ವಿದೇಶಿ ಆಟಗಾರ ಕೇನ್ ವಿಲಿಯಮ್ಸನ್ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ.

RCB – ವಿರಾಟ್ ಕೊಹ್ಲಿ, CSK – ಎಮ್.ಎಸ್ ಧೋನಿ, KKR – ದಿನೇಶ್ ಕಾರ್ತಿಕ್, KXIP – ಆರ್.ಅಶ್ವಿನ್, RR – ಅಜಿಂಕ್ಯ ರಹಾನೆ, DD – ಗೌತಮ್ ಗಂಭೀರ್, MI – ರೋಹಿತ್ ಶರ್ಮಾ. SRH – ಕೇನ್ ವಿಲಿಯಮ್ಸನ್.

Leave a Reply

Your email address will not be published.

Social Media Auto Publish Powered By : XYZScripts.com