ಕೇದಾರನಾಥದಲ್ಲಿ ವಾಯುಪಡೆಯ ಕಾರ್ಗೋ ವಿಮಾನ ಪತನ : ಆರು ಮಂದಿಗೆ ಗಾಯ

ಕೇದಾರನಾಥ : ಇಲ್ಲಿನ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಕಾರ್ಗೋ ವಿಮಾನವೊಂದು ಪತನಗೊಂಡಿದ್ದು, ಆರು ಮಂದಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಎಂಐ 17 ಹೆಲಿಕಾಪ್ಟರ್‌ ಸೈನಿಕರಿಗೆ ಸಲಕರಣೆಗಳನ್ನು ಸಾಗಿಸುತ್ತಿತ್ತು. ಹೆಲಿಕಾಪ್ಟರ್‌ ಲ್ಯಾಂಡಿಂಗ್ ಆಗುವ ವೇಳೆ ಗೇಟ್‌ಗೆ ಗುದ್ದಿ ಮಗುಚಿ ಬಿದ್ದಿರುವುದಾಗಿ ತಿಳಿದುಬಂದಿದೆ. ಘಟನೆ ನಡೆದ ಕೂಡಲೆ ಸ್ಥಳೀಯರು ಪೊಲೀಸರ ಜೊತೆಗೂಡಿ ರಕ್ಷಣಾ ಕಾರ್ಯ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ಎಂಐ-17 ಹೆಲಿಕಾಪ್ಟರ್‌ ಪತನಗೊಂಡಿದ್ದು, ಅದರಲ್ಲಿದ್ದ ಏಳೂ ಮಂದಿ ಸಾವಿಗೀಡಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com