ಕಾಂಗ್ರೆಸ್‌ನಲ್ಲಿ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡೋರಿಗೆ ಮಾತ್ರ ಆತಿಥ್ಯ : ಕಾಂಗ್ರೆಸ್‌ ಹಿರಿಯ ನಾಯಕ !

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದಲ್ಲಿ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡಿದವರಿಗೆ ಮಾತ್ರ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ‌ ಹಿರಿಯ ನ್ಯಾಯವಾದಿ ಪಿ .ಎಚ್. ನಿರಲಕೇರಿ ಕಾಂಗ್ರೆಸ್ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದರು.
ಇಂದು ಬೆಳಿಗ್ಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ನಿರಲಕೇರಿಯವರನ್ನು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ನಿರಾಶರಾದ ನಿರಲಕೇರಿ, 30-35 ವರ್ಷ ಪಕ್ಷದ ಕೆಲಸ ಮಾಡಿದವರಿಗೆ ಕಾಂಗ್ರೆಸ್ ನಲ್ಲಿ ಅವಮಾನ ಮಾಡಲಾಗುತ್ತಿದೆ. ನಾಲ್ಕು ಜನ ಚೀಲಾಗಳು, ಹೆಂಗಸರನ್ನು ಸಪ್ಲೈ ಮಾಡುವರಿಗೆ ಮಾತ್ರ ಕಾಂಗ್ರೆಸ್ ನಲ್ಲಿ ಆದ್ಯತೆ ನೀಡುತ್ತಾರೆ. ನಮ್ಮಂತ ನಿಷ್ಟಾವಂತರಿಗೆ ಇಲ್ಲಿ ಬೆಲೇನೆ ಇಲ್ಲ. ಪಕ್ಷದ ಸಂಘಟನೆ ಇಂತವರಿಂದ ಆಗುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ ನಾಯಕರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹೊರ ನಡೆದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಾಚಿಗೆಯಾಗಬೇಕು. ನಾಲಾಯಕ್ ನನ್ನ ಮಕ್ಳನ್ನು ಇಟ್ಟುಕೊಂಡ ಏನು ಮಾಡತ್ತಾರೋ ಮಾಡಲಿ ಎಂದು ಗುಡುಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com