ಹನುಮನಿಗೂ ತಟ್ಟಿದ ನೀತಿ ಸಂಹಿತೆ : ನಿನ್ನೆಯಿಂದಲೂ ರಸ್ತೆಯಲ್ಲೇ ನಿಂತ ವೀರ ಆಂಜನೇಯ !

ಹೊಸಕೋಟೆ : ಪ್ರಪಂಚದಲ್ಲೇ ಅತಿ ಎತ್ತರದ ಬೃಹದ್ರೂಪಿ ಶ್ರೀ ಹನುಮಾನ್ ಮೂರ್ತಿ ಪ್ರತಿಷ್ಠಾಪನೆಗೆ ವಿಘ್ನ ಎದುರಾಗಿದೆ. ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಕಾಚರಕನಹಳ್ಳಿಯಲ್ಲಿ ಪ್ರತಿಷ್ಠಾಪನೆಗೆಂದು ತರುತ್ತಿದ್ದ 62 ಅಡಿ ಎತ್ತರ, 750 ಟನ್ ತೂಕದ ಏಕ‌ಶಿಲೆ ವಿಗ್ರಹ ಇದಾಗಿದ್ದು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಗ್ರಹವನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಲಾಗಿದೆ.

ಈ ಏಕಶಿಲಾ ವಿಗ್ರಹವನ್ನು ಕೋಲಾರ ಜಿಲ್ಲೆಯ ನರಸಾಪುರದಿಂದ ಬೆಂಗಳೂರಿನ ಕಾಚರಕನ ಹಳ್ಳಿಗೆ ರಸ್ತೆ ಮೂಲಕ ಟ್ರಕ್‌ ನಲ್ಲಿ ತರಲಾಗುತ್ತಿದ್ದು, ಹೊಸಕೋಟೆಯಲ್ಲೇ ಪೊಲೀಸರು ಇದನ್ನು ತಡೆದಿದ್ದಾರೆ. ಇಲಾಖೆಗಳ ಅನುಮತಿ ಪಡೆದು ತಂದಿದ್ದರೂ ಪೊಲೀಸರು ಮುಂದೆ ತೆಗೆದುಕೊಂಡು ಹೋಗಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ನಿನ್ನೆ ರಾತ್ರಿಯಿಂದಲೂ ಹೊಸಕೋಟೆಯ ಬಳಿ ವಿಗ್ರಹ ನಿಂತಿದ್ದು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಕೆ.ಜೆ ಜಾರ್ಜ್‌ ಹೇಳಿದ್ದಾರೆ. ಅಲ್ಲದೆ ಹನುಮನ ಮೂರ್ತಿಯನ್ನು ತೆಗೆದುಕೊಂಡು ಹೋಗಲು ಬಿಡದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶ್ರೀರಾಮ ಚೈತನ್ಯ ವರ್ದಿನಿ ಟ್ರಸ್ಟ್‌ ಹಾಗೂ ಚುನಾವಣಾ ಅಧಿಕಾರಿಗಳಿಂದ ಸಭೆ ನಡೆಸಲಾಗಿದೆ. ಹನುಮನ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಗಾಲು ಹಾಕುತ್ತಿರುವವರ ವಿರುದ್ದ ಹೊಸಕೋಟೆ ಹೈವೆಯಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

Leave a Reply

Your email address will not be published.

Social Media Auto Publish Powered By : XYZScripts.com