ಅಮಿತ್ ಶಾ ವಿರುದ್ದ ದೂರು : ವರದಿ ನೀಡುವಂತೆ ಚುನಾವಣಾ ಆಯೋಗ ಆದೇಶ ?

ಮೈಸೂರು : ಮೃತ ರಾಜು ಕುಟುಂಬಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 5 ಲಕ್ಷ ಪರಿಹಾರ ಭರವಸೆ ಘೋಷಣೆ ಹಿನ್ನೆಲೆ ದೆಹಲಿಯ ಚುನಾವಣಾ ಆಯೋಗದಲ್ಲಿ ಅಮಿತ್ ಶಾ ಅವರ ಮೇಲೆ ದೂರು ನೀಡಲಾಗಿದೆ.  ಬೆಂಗಳೂರಿನ ಚುನಾವಣಾ ಆಯೋಗಕ್ಕೆ ಕೇಸ್ ವರ್ಗಾವಣೆಯಾಗಿರುವುದಾಗಿ ಮೈಸೂರು ಡಿಸಿ ಮಾಹಿತಿ ನೀಡಿದ್ದಾರೆ.
.ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ದೆಹಲಿಯ ಕಾಂಗ್ರೆಸ್ ಮುಖಂಡರು ಅಮಿತ್ ಶಾ ವಿರುದ್ಧ ದೂರು ದಾಖಲಿಸಿದ್ದಾರೆ. ದೆಹಲಿಯ ಚುನಾವಣಾ ಆಯೋಗ ಬೆಂಗಳೂರಿನ ಚುನಾವಣಾ ಆಯೋಗಕ್ಕೆ ಕೇಸ್ ವರ್ಗಾವಣೆ ಮಾಡಿದ್ದು, ಬೆಂಗಳೂರಿನ ಚುನಾವಣಾ ಆಯೋಗ ಈಗ ಕೇಸ್ ಸಂಬಂಧ ವರದಿ ಕೇಳಿದೆ. ಕುಟುಂಬದವರನ್ನ ಭೇಟಿ ಮಾಡಿ ವರದಿ ಕೊಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಈಗ ನಾವು ರಾಜು ಕುಟುಂಬವನ್ನ ಭೇಟಿ ಮಾಡಿ ವರದಿ ಕೊಡುವುದಾಗಿ ಹೇಳಿದ್ದಾರೆ..
ನೀತಿ ಸಂಹಿತೆ ಉಲ್ಲಂಘನೆಯ 26 ವಿವಿಧ ರೀತಿಯ ದೂರುಗಳು ಬಂದಿದ್ದು, ಈಗಾಗಲೇ ನಾಲ್ಕು ಎಫ್ ಐಆರ್ ದಾಖಲಾಗಿವೆ. 144 ರೈಡ್, ಅಕ್ರಮ ಮಧ್ಯ ಸಾಗಣೆ ಆರೋಪದಡಿ 29ಜನರನ್ನು ಬಂಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ದೂರು ದಾಖಲಿಸುವುದು ಹಾಗೂ ಅನುಮತಿಗೆ ತಾಲೂಕು ಕಚೇರಿಗಳಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಮತದಾರರನ್ನ ಸೆಳೆಯಲು ಚುನಾವಣಾಧಿಕಾರಿಗಳ ಅನುಮತಿ ಮುಂದಾದ ನಾಯಕರ ಬಗ್ಗೆ ಮಾತನಾಡಿದ ಅವರು, ಮತದಾರರಿಗೆ ಊಟ ಹಾಕಲು ಅನುಮತಿ ಕೇಳುತ್ತಿದ್ದಾರೆ. ಗಣ್ಯ ವ್ಯಕ್ತಿಗಳು ನನಗೆ ಫೋನ್ ಮಾಡಿ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅದ್ಯಾವುದಕ್ಕೂ ನಾವಿನ್ನೂ ಅನುಮತಿ ಕೊಟ್ಟಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com