Cricket : ಆಸ್ಟ್ರೇಲಿಯಾ ವಿರುದ್ಧ 492 ರನ್ ಐತಿಹಾಸಿಕ ಜಯ : 3-1 ರಿಂದ ಸರಣಿ ಗೆದ್ದ ಆಫ್ರಿಕಾ

ಜೋಹಾನೆಸ್ಬರ್ಗ್ ನ ವಾಂಡರರ್ಸ್ ಅಂಗಳದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತೀಥೇಯ ದಕ್ಷಿಣ ಆಫ್ರಿಕಾ ತಂಡ ಐತಿಹಾಸಿಕ 492 ರನ್ ಗಳ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ರಿಂದ ತನ್ನದಾಗಿಸಿಕೊಂಡಿದೆ.

ಗೆಲ್ಲಲು ಎರಡನೇ ಇನ್ನಿಂಗ್ಸ್ ನಲ್ಲಿ 611 ರನ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 119 ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರವಾಗಿ ಜೋ ಬರ್ನ್ಸ್ (42) ಹಾಗೂ ಪೀಟರ್ ಹ್ಯಾಂಡ್ಸಕಾಬ್ (24) ಅವರನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸಮನ್ ಗಳ್ಯಾರೂ ಎರಡಂಕಿಯನ್ನೂ ದಾಟಲಿಲ್ಲ.

ಮಾರಕ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ ತಂಡದ ವೇಗಿ ವೆರ್ನನ್ ಫಿಲ್ಯಾಂಡರ್ 6 ವಿಕೆಟ್ ಪಡೆದು ಪಂದ್ಯ ಶ್ರೇಷ್ಟ ಎನಿಸಿದರು. ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕಗಿಸೋ ರಬಾಡಾ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.

Leave a Reply

Your email address will not be published.