ಕಾಂಗ್ರೆಸ್‌ನಲ್ಲಿ ನನ್ನ ಟಿಕೆಟ್ಟೇ ಇನ್ನೂ ಕನ್ಫರ್ಮ್ ಆಗಿಲ್ಲ : G ಪರಮೇಶ್ವರ್‌

ಹುಬ್ಬಳ್ಳಿ : ಕಾಂಗ್ರೆಸ್‌ನಲ್ಲಿ ಈವರೆಗೂ ಯಾವುದೇ ಅಭ್ಯರ್ಥಿಗಳ ಟಿಕೆಟ್ ಅಂತಿಮ ಮಾಡಿಲ್ಲ. ನನ್ನದೇ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳು ನನ್ನನ್ನು ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ವರೆಗೂ ಯಾರಿಗೂ ಕನ್ಪರ್ಮ್ ಮಾಡಿಲ್ಲ ಅದೆಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಷಯ. ಖೇಣಿ ಟಿಕೆಟ್ ಕೂಡ ಈವರೆಗೂ ಕನ್ಪರ್ಮ್ ಆಗಿಲ್ಲ.  ಅಮಿತ್ ಶಾ ಮತ್ತು ಮೋದಿ ಎಷ್ಟೇ ಬಾರಿ ರಾಜ್ಯ ಪ್ರವಾಸ ಮಾಡಿದ್ರೂ ಯಾವುದೇ ವ್ಯತ್ಯಾಸ ಆಗಲ್ಲ.
ಮತ್ತೆ ಅಧಿಕಾರ ಹಿಡಿಯುವುದು ನಾವೇ. ಮೊದಲು ನಮ್ಮ ಉದ್ದೇಶ ಚುನಾವಣೆ ಗೆಲ್ಲುವುದು. ಬಳಿಕ ಸಿಎಂ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗುತ್ತದೆ ಎಂದಿದ್ದಾರೆ. ಸಿಎಂ ವರುಣಾ ಕ್ಷೇತ್ರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಟೆಕೆಟ್‌ ಕನ್ಫರ್ಮ್‌ ಆಗದ ಹಿನ್ನೆಲೆಯಲ್ಲಿ ಕ್ಷೇತ್ರ ಬದಲಾವಣೆಯ ಪ್ರಮೇಯವೇ ಇಲ್ಲವಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com