21ನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕ್ಷಣಗಣನೆ : ಆತಿಥ್ಯಕ್ಕೆ ಸಜ್ಜಾದ ಗೋಲ್ಡ್‌ಕೋಸ್ಟ್ ನಗರ

21ನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಏಪ್ರಿಲ್ 5 ರಂದು ಗುರುವಾರ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, 4 ರಂದು ಬುಧವಾರ ಉದ್ಘಾಟನಾ ಸಮಾರಂಭ ನಡೆಯಲಿದೆ. ಕ್ರೀಡಾಕೂಟದ ಆತಿಥ್ಯ ವಹಿಸಲು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ ಗೋಲ್ಡ್ ಕೋಸ್ಟ್ ನಗರ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ.

ಆಸ್ಟ್ರೇಲಿಯಾ 5ನೇ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತಿದೆ. ಆಸ್ಟ್ರೇಲಿಯಾ ಇದಕ್ಕೂ ಮುನ್ನ 1938, 1962, 1982 ಹಾಗೂ 2006 ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು.

ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತನ್ನ 227 ಆಟಗಾರರನ್ನು ಕಾಂಗರೂ ನಾಡಿಗೆ ಕಳುಹಿಸಿದೆ. ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಉದ್ಘಾಟನಾ ಸಮಾರಂಭದಲ್ಲಿ, ಭಾರತ ಕ್ರೀಡಾಪಟುಗಳ ಪಡೆಯನ್ನು ಧ್ವಜ ಹಿಡಿದು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಉದ್ಘಾಟನಾ ಸಮಾರಂಭ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಗೋಲ್ಡ್ ಕೋಸ್ಟ್ ನಗರದ ಕರಾರಾ ಮೈದಾನಸಲ್ಲಿ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com