ಗಂಡು ಮಗು ಹೆರಲಿಲ್ಲ ಎಂದು ಬೆಂಕಿಯಿಟ್ಟು ಪತ್ನಿಯ ಕೊಲೆ : ಪತಿಯ ಮೇಲೆ ಪೋಷಕರ ಆರೋಪ

ಗಂಡು ಮಕ್ಕಳಾಗಿಲ್ಲ ಎಂದು ಬೆಂಕಿ ಹಚ್ಚಿ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಪತ್ನಿಯ ಕುಟುಂಬದವರಿಂದ ಕೇಳಿಬಂದಿದೆ. ಮಾರ್ಚ್ 28 ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಕೊಪ್ಪ ಗೇಟ್ ಬಳಿಯ ಮನೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವೀಣಾ(27) ಕೊಲೆಯಾದ ದುರ್ದೈವಿಯಾಗಿದ್ದಾಳೆ. ಗಂಡ ಶಶಿಕುಮಾರ್(34) ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ವೀಣಾಗೆ ಕಳೆದ 7 ವರ್ಷದ ಹಿಂದೆ ಶಶಿಕುಮಾರ್ ಜೊತೆ ಮದುವೆಯಾಗಿತ್ತು. ಕಳೆದ ಮೂರು ವರ್ಷದಿಂದ ಗಂಡ ಶಶಿಕುಮಾರ್ ಪತ್ನಿಗೆ ನಿತ್ಯವೂ ಹಿಂಸೆ ನೀಡುತ್ತಿದ್ದ. ಕಳೆದ 28 ನೇ ತಾರೀಕು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ..

ದಂಪತಿಗೆ ಸಂಜನಾ ಶ್ರೀ ಮತ್ತು ರುಚಿತಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಆದರೆ ಗಂಡು ಮಗುವಾಗಿಲ್ಲ ಎಂದು ಕೃತ್ಯ ಎಸಗಿದ್ದಾನೆ ಎಂದು ಆರೋಪ ಮಾಡಲಾಗಿದೆ. ಜಿಗಣಿ ಪೊಲೀಸರು ಶಶಿಕುಮಾರ್ ನನ್ನು ಬಂಧಿಸಿದ್ದಾರೆ. ಬೆಂಕಿ ಹಚ್ಚಿ ಮನೆಗೆ ಬೆಂಕಿ ಬಿದ್ದಿತ್ತು ಎಂದು ಶಶಿಕುಮಾರ್ ಹೇಳಿದ್ದ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com