ದೇವೇಗೌಡರ ಹುಟ್ಟುಹಬ್ಬದಂದು ನನ್ನ ಪಕ್ಷ ಅಧಿಕಾರ ಸ್ವೀಕಾರ ಮಾಡುತ್ತೆ, ಇದು ಸತ್ಯ : HDK

ಬೆಂಗಳೂರು : ಸೋಮವಾರ ನಡೆದ ಕುಮಾರಪರ್ವ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ನಿಮ್ಮ ಮನೆ ಮಗ ಬರ್ತಿದ್ದಾನೆ ಎಂಬಂತ ಭಾವನೆಯನ್ನು ನಾನು ನಿಮ್ಮಲ್ಲಿ ಕಂಡೆ. ಮಳೆ ಬಂದ ಕಾರಣ ಎಲ್ಲರಿಗೂ ತೊಂದರೆಯಾಗಿದೆ. ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ನಾನಲ್ಲದೇ ಬೇರೆಯವರ ಕಾರ್ಯಕ್ರಮವಾಗಿದ್ದರೆ ಜನ ಖಾಲಿಯಾಗುತ್ತಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆನ್ನೆ ನಡೆದ ಸಮಾವೇಶ ಜೀವಮಾನದಲ್ಲಿಯೇ  ಮರೆಯಲಾಗದಂತಹುದು. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ನನ್ನ ಕಾರ್ಯಕ್ರಮಕ್ಕೆ ಜನ ಬರ್ತಿದ್ದಾರೆ. ಮೇ. 18ರಂದು ದೇವೇಗೌಡರ ಹುಟ್ಟುಹಬ್ಬ ಅಂದು ನನ್ನ ಪಕ್ಷ ಅಧಿಕಾರ ಸ್ವೀಕಾರ ಮಾಡಲಿದೆ. ಇದು ಸತ್ಯ ಎಂದಿದ್ದಾರೆ.

ಕಳೆದ 5ದಿನದಿಂದ ಸಿಎಂ ಹಳ್ಳಿ ಹಳ್ಳಿಗೆ ಹೋಗುವ ಮೂಲಕ ಮೈಸೂರು ಭಾಗದಲ್ಲಿ ಠಿಕಾಣಿ ಹೂಡಿದ್ದಾರೆ. ನಾನು ಸರ್ಕಾರವನ್ನ ದುರುಪಯೋಗ ಮಾಡಿ ಚುನಾವಣೆ ನಡೆಸಲಿಲ್ಲ. ಇಂದು ರಾಜ್ಯ ಸರ್ಕಾರ ಜನರ ಹಣದಲ್ಲಿ ಜಾಹೀರಾತು ನೀಡಿ ಖರ್ಚು ಮಾಡ್ತಿದೆ. ಆದರೆ ನಾನು ಜನರ ನೋವಿಗೆ ಸ್ವಂದಿಸುವ ವ್ಯಕ್ತಿಯಾಗುತ್ತೇನೆ ಎಂಬ ವಿಶ್ವಾಸ ನನ್ನ ತಂದೆಯದ್ದು. ಹಾಗಾಗಿ ಜನರು ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದಾರೆ. ರಾಜ್ಯದ ಜನರೇ ಕಾಂಗ್ರೆಸ್ ಪಕ್ಷವನ್ನ ದೂಳಿಪಟ ಮಾಡ್ತಿವಿ ಅಂತ ಕಿರುಚುತ್ತಿರುವುದಾಗಿ ಹೇಳಿದ್ದಾರೆ.

ರಾಜ್ಯದ ಅಭಿವೃದ್ದಿ ಮಾಡಲು ಮುಂದಾದಾಗ ಕಾಂಗ್ರೆಸ್ ಸಾಕಷ್ಟು ಅಡ್ಡಗಾಲು ಹಾಕಿದೆ. ಕಳೆದ ಬಾರಿ ಕೂಡಾ ನಾನು ರಾಮನಗರದಲ್ಲಿ ಅರ್ಜಿಹಾಕಿ ಬಂದಿದ್ದೆ ಉಳಿದಂತೆ ಎಲ್ಲವನ್ನ ಕಾರ್ಯಕರ್ತರೇ ಮಾಡಿ ಗೆಲಿಸ್ಸಿದ್ರು. ನಾನು ಗಳಿಸಿರುವುದು ಜನಸಾಮಾನ್ಯರ ಪ್ರೀತಿಯನ್ನು . ಹಾಗಾಗಿ ಈ ಬಾರಿಯೂ ಅರ್ಜಿ ಹಾಕುತ್ತೇನೆ ಎಂದಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 25ಸ್ಥಾನವನ್ನು ದೇವೇಗೌಡರ ಮಡಿಲಿಗೆ ಹಾಕುತ್ತೇನೆ. ಅದು ನನ್ನ ಕರ್ತವ್ಯ ಕೂಡಾ.ರಾಜ್ಯದ ಯಾವುದೇ ಭಾಗಕ್ಕೆ ಹೋದ್ರು ಜನ ಸೇರ್ತಾರೆ. ಜಗಳೂರಿನಲ್ಲಿ ಸೇರಿದ ಜನರೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ 25ಕ್ಕೆ ಬಂದ್ರು ಆಶ್ಚರ್ಯವಿಲ್ಲ. ಅವರ ಹಣೆಬರಹ ಚುನಾವಣಾ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.

ಸುದೀಪ್ ಮತ್ತು ನನ್ನದು ಮೊದಲಿನಿಂದಲೂ ಅವಿನಾಭಾವ ಸಂಬಂಧ. ರಾಜಕೀಯದ ಬಗ್ಗೆಯೂ ನಾನು ಮಾತನಾಡಿದ್ದೇನೆ.ಕರ್ನಾಟಕ ರಾಜ್ಯದ ಜನರ ಸಮಸ್ಯ ಸರಿಪಡಿಸಲು ನೀವು ಉತ್ತಮ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದೇನೆ. ಮುಂದಿನ ನಡೆ ಸುದೀಪ್ ಗೆ ಬಿಟ್ಚಿದ್ದು. ಅವರಿಗೆ ನನ್ನ ಮೇಲೆ ಸಾಕಷ್ಟು ನಂಬಿಕೆಯಿದೆ.ಪಕ್ಷಕ್ಕೆ ಸೇರುವುದು, ನಮ್ಮ ಪಕ್ಷದ ಪ್ರಚಾರಕ್ಕೆ ಮಾತ್ರ ಸೀಮಿತವಾಗುವುದು ಅವರಿಗೆ ಬಿಟ್ಟ ವಿಚಾರ.ದೇವೇಗೌಡರು ಕೂಡಾ ಸುದೀಪ್ ರವರಿಗೆ ಸಲಹೆ ನೀಡಿರುವುದಾಗಿ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುವ ಸಿದ್ದರಾಮಯ್ಯನವರು ಜೋತಿಷ್ಯ ಕಲ್ತಿದ್ದಾರಾ ? ಅವರು ಆ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಮೊದಲು ಹೇಳಲಿ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.