ಭೂಮಿಗೆ ಅಪ್ಪಳಿಸಿದ ಚೀನಾ ಬಾಹ್ಯಾಕಾಶ ಕೇಂದ್ರ : ಪೆಸಿಫಿಕ್ ಸಾಗರದಲ್ಲಿ ಬಿದ್ದ Tiangong-1

ಕಾರ್ಯವನ್ನು ಸ್ಥಗಿತಗೊಳಿಸಿದ್ದ ಚೀನಾದ ಬಾಹ್ಯಾಕಾಶ ಕೇಂದ್ರ ಸೋಮವಾರ ಭೂಮಿಯ ವಾತಾವರಣಕ್ಕೆ ಧುಮುಕಿದೆ. ಚೀನಾದ ಬಹು ಕೋಟಿ ವೆಚ್ಚದ ಬಾಹ್ಯಾಕಾಶ ಯೋಜನೆಯಾಗಿದ್ದ ಟಿಯಾಂಗಾಂಗ್-1 ನಿಯಂತ್ರಣ ಕಳೆದುಕೊಂಡು ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ.

ಸೋಮವಾರ ಬೆಳಿಗ್ಗೆ 8.15 ರ ಸುಮಾರಿಗೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಬಳಿಕ ಚೀನಾ ಬಾಹ್ಯಾಕಾಶ ಕೇಂದ್ರದ ಬಹುಭಾಗ ಪೆಸಿಫಿಕ್ ಸಾಗರ ಸೇರುವ ಮುನ್ನವೇ ಸುಟ್ಟುಹೋಗಿದೆ.

ಚೀನಾದ ಮೊದಲ ಬಾಹ್ಯಾಕಾಶ ನಿಲ್ದಾಣವಾದ ಟಿಯಾಂಗಾಂಗ್-1 ಅನ್ನು 2011 ರಲ್ಲಿ ಆಗಸಕ್ಕೆ ಉಡಾಯಿಸಲಾಗಿತ್ತು. 2016 ರಲ್ಲಿ ಭೂಮಿಯ ಮೇಲಿನ ನಿಯಂತ್ರಣ ಕೇಂದ್ರದೊಂದಿಗೆ ಟಿಯಾಂಗಾಂಗ್-1 ನ ಸಂಪರ್ಕ ಕಡಿತಗೊಂಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com