ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲಿ, ಆಮೇಲೆ CM ಆಗುವ ಮಾತಾಡಲಿ : ಈಶ್ವರಪ್ಪ

ಹಾವೇರಿ : ‘ ಸಿದ್ದರಾಮಯ್ಯ ಅವರು ಮೊದಲು ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಚುನಾವಣೆ ಗೆದ್ದು ಬರಲಿ. ಆ ಮೇಲೆ ಸಿ.ಎಂ. ಆಗುವ ಮಾತು ಆಡಲಿ ‘ ಎಂದು ಹಾವೇರಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕಂತೆ ಸಿ.ಎಂ. ಮಾತನಾಡಲಿ. ಬಿಜೆಪಿ ಒಂದು ಕುಟುಂಬ ಇದ್ದ ಹಾಗೇ, ನಮ್ಮಲ್ಲಿ ಇದ್ದ ಗೊಂದಲ ಸರಿಪಡಿಸಿಕೊಳ್ಳುತ್ತೇವೆ. ಸೋಮಣ್ಣ ಮಾಡಿದ ಕೆಲಸ ಅಶಿಸ್ತು ಅಲ್ಲ, ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿ ಅಂದ್ರೆ ಓಡೋಡಿ ಬರುತ್ತಾರೆ. ಸಿದ್ದರಾಮಯ್ಯ ಹಾಗೂ ರಾಹುಲ್ ಅಂದ್ರೆ ಓಡಿ ಹೋಗುತ್ತಾರೆ. ಹಾವೇರಿ ಜಿಲ್ಲೆಯ ಕಾಗಿನೆಲ್ಲಿಯಲ್ಲಿರುವ ಹಿಂದುಳಿದ ವರ್ಗದ ಸಮಾವೇಶಕ್ಕೆ ಅಮಿತ್ ಶಾ ಬರುವದು ನಿಶ್ಚಿತ. ಕಾಗಿನೆಲ್ಲಿಯ ಆದಿಕೇಶವ ದೇವಸ್ಥಾನಕ್ಕೆ ಹಾಗೂ ಮಠಕ್ಕೆ ಭೇಟಿ ನೀಡಲಿದ್ದಾರೆ ‘

‘ ಮುಖ್ಯಮಂತ್ರಿಗಳು ೫ ವರ್ಷದಲ್ಲಿ ಹಿಂದುಳಿದ ವರ್ಗಗಳಕ್ಕೆ ದಲಿತ ಅಭಿವೃದ್ಧಿಗೆ ಖರ್ಚು ಮಾಡಿರುವ ಹಣ ಏಷ್ಟು ಎಂದು ಬಹಿರಂಗ ಪಡಿಸಲಿ. ಬಿಜೆಪಿ ಸರ್ಕಾರ ಇದ್ದಾಗ, ಹಿಂದುಳಿದ ವರ್ಗದ ಸಾಕಷ್ಟು ಕೆಲಸ ಮಾಡಿದೆ.‌ ನರೇಂದ್ರ ಮೋದಿ ಪ್ರಧಾನಿಯಾಗುವ ತನಕ ಹೋರಾಟ ಮಾಡಿಕೊಂಡು ಬಂದಿದೆ. ನರೇಂದ್ರ ಮೋದಿ ಸರ್ಕಾರ ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಂವಿಧಾನ ಬದ್ಧ ಹಕ್ಕು ನೀಡಲು ಮುಂದಾಗಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com