ಸಪ್ತಪದಿ ತುಳಿಯುವಾಗಲೇ ಮದುಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ !

ಶಿವಮೊಗ್ಗ : ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಪ್ರಿಯಕರ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆಯ ಕಾಪ್ಟೆಮನೆಯಲ್ಲಿ ನಡೆದಿದೆ.


ಹಲ್ಲೆಗೊಳಗಾದ ಯುವತಿಯನ್ನು ಸೀತಾ (24) ಎಂದು ಹೆಸರಿಸಲಾಗಿದೆ. ಸೀತಾಗೆ ಭರತ್‌ ಎಂಬಾತನ ಜೊತೆ ಮದುವೆ ನಡೆಯುತ್ತಿತ್ತು. ತಾಳಿ ಕಟ್ಟಿದ ನಂತರ ಸಪ್ತಪದಿ ತುಳಿಯುತ್ತಿದ್ದಾಗ ಅಲ್ಲೇ ಇದ್ದ ಭಗ್ನ ಪ್ರೇಮಿ ಮಧು ಮಗಳ ಕುತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಇದನ್ನು ತಪ್ಪಿಸಲು ಬಂದ ಹುಡುಗಿಯ ಚಿಕ್ಕಪ್ಪ ಗಂಗಾಧರಪ್ಪ ಎಂಬುವವರ ಮೇಲೂ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ಸೀತಾ ಹಾಗೂ ಗಂಗಾಧರಪ್ಪನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಆರೋಪಿಯನ್ನು ಅಲ್ಲೇ ಇದ್ದ ಸಂಬಂಧಿಕರು ಪೋಲೀಸರಿಗೆ ಒಪ್ಪಿಸಿದ್ದಾರೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

 

Leave a Reply

Your email address will not be published.

Social Media Auto Publish Powered By : XYZScripts.com