ಸಲ್ಮಾನ್ ಖಾನ್‌ಗಾಗಿ ಮತ್ತೆ ಬಾಲಿವುಡ್‌ಗೆ ಬರ್ತಾರಾ ಪ್ರಿಯಾಂಕಾ ಛೋಪ್ರಾ…!!

ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಹಾಲಿವುಡ್‌ ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಮತ್ತೆ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಹಾಲಿವುಡ್‌ನ ರಿಯಾಲಿಟಿ ಶೋವೊಂದನ್ನು ಪ್ರಿಯಾಂಕ ಹೋಸ್ಟ್‌ ಮಾಡುತ್ತಿದ್ದು, ಬಾಲಿವುಡ್‌ನಿಂದ ದೂರವಾಗಿದ್ದಾರೆ.
ಹಾಲಿವುಡ್‌ ಕ್ವಾಂಟಿಕೋ ಸೀರೀಸ್‌ನ 3ನೇ ಸರಣಿಯಲ್ಲಿ ಪ್ರಿಯಾಂಕ ಅಭಿನಯಿಸುತ್ತಿದ್ದು, ಏಪ್ರಿಲ್‌ 26ರಿಂದ ಈ ಶೋ ಪ್ರಸಾರವಾಗಲಿದೆ. ಈ ಮಧ್ಯೆ ಪಿಗ್ಗಿ, ಬಾಲಿವುಡ್‌ನಲ್ಲಿ ಮತ್ತೆ ತೊಡಗಿಸಿಕೊಳ್ಳುವ ಯೋಚನೆಯಲ್ಲಿದ್ದು, ಕ್ವಾಂಟಿಕೋ ಸರಣಿ 4ರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
2016ರಲ್ಲಿ ತೆರೆಕಂಡ ‘ಜೈ ಗಂಗಾಜಲ್‌’ ಸಿನಿಮಾದ ಬಳಿಕ ಪ್ರಿಯಾಂಕ ಬಾಲಿವುಡ್‌ನ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ಈಗ ಪಿಗ್ಗಿ ಎದುರು ಬಾಲಿವುಡ್‌ನ ನಿರ್ದೇಶಕ ಅಲಿ ಅಬ್ಬಾಸ್‌ ಜಾಫರ್‌ ಪ್ರಿಯಾಂಕಾಗಾಗಿ ಆಫರ್‌ ಒಂದನ್ನು ಮುಂದಿಟ್ಟಿದ್ದು, ಇದಕ್ಕೆ ಪ್ರಿಯಾಂಕಾ ಒಪ್ಪಿಗೆ ಸೂಚಿಸಿದ್ದಾರಂತೆ. ಸಲ್ಮಾನ್ ಖಾನ್ ಅಭಿನಯದ “ಭಾರತ್‌” ಸಿನಿಮಾಗೆ ಪ್ರಿಯಾಂಕಾ ನಾಯಕಿಯಾಗುವುದರ ಕುರಿತು ಅಲಿ ಅಬ್ಬಾಸ್‌, ಪ್ರಿಯಾಂಕಾ ಜೊತೆ ಚರ್ಚಿಸಿದ್ದಾರೆ. ಇದಕ್ಕೆ ಪ್ರಿಯಾಂಕ ಸಹ ಒಪ್ಪಿಗೆ ಸೂಚಿಸಿದ್ದಾರಂತೆ. ಅಲ್ಲದೆ “ಭಾರತ್‌” ಸಿನಿಮಾದ ಬಗ್ಗೆ ಪ್ರಿಯಾಂಕಾ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com