ವರುಣಾದಲ್ಲಿ ವಿಜಯೇಂದ್ರ ಯಾಕೆ ಅವರಪ್ಪ ಯಡಿಯೂರಪ್ಪನೇ ಬಂದು ನಿಲ್ಲೋಕೆ ಹೇಳಿ : CM

ಮೈಸೂರು : ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ವಿಜಯೇಂದ್ರ ಯಾಕೆ ಅವರ ಅಪ್ಪ ಯಡ್ಯೂರಪ್ಪ ಅವರನ್ನೇ ಬಂದು ನಿಲ್ಲೋಕೆ ಹೇಳಿ ಎಂದಿದ್ದಾರೆ.
ಮೈಸೂರಿನಲ್ಲಿ ವಿಜಯೇಂದ್ರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡು ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಬಂದು ನಿಂತ ತಕ್ಷಣ ಜನ ಓ ಅಂತ ಓಡಿ ಬರ್ತಾರಾ?. ನನ್ನ ಮಗ ಚುನಾವಣೆಗೆ ನಿಂತರೂ ಸಿಎಂ ಮಗ ಅಂತ ಓಟಾಕೋದಿಲ್ಲ. ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದರ ಮೇಲೆ ಓಟು ಹಾಕ್ತಾರೆ. ವರುಣ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ.ಜನರಿಗೆ ಯಾರಿಗೆ ಓಟು ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರ್ಯಾರೊ ಎಲ್ಲೆಲ್ಲೊ ನಿಲ್ತಿದ್ರು. ವಿಜಯೇಂದ್ರ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೇ ಕೇಳಲೇಬೇಡಿ ಎಂದಿದ್ದಾರೆ.

Leave a Reply

Your email address will not be published.