ಪ್ರೀತಿಸಿ ಮನೆಬಿಟ್ಟು ಹೋದ್ಲು, ಮನೆಯವರು ಒಪ್ಪಿ ಮದುವೆ ಮಾಡಿಸಲು ಮುಂದಾದಾಗ ಆಗಿದ್ದೇ ಬೇರೆ!

ಕಾರವಾರ : ಪ್ರೀತಿಸಿ ಮನೆಬಿಟ್ಟು ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಡುವಾಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮದುವೆಯನ್ನು ನಿಲ್ಲಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರದ ಹಬ್ಬುವಾಡದ 17 ವರ್ಷದ ಪಿ.ಯು.ಸಿ ವಿದ್ಯಾರ್ಥಿನಿ, ಬಂಗಾರಪ್ಪ ನಗರದ ನಿವಾಸಿ ಇಮ್ರಾನ್‌ ಇಮಾಮ್ ಸಾಬ್ ಶೇಖ್ ಎಂಬುವವನನ್ನು ಪ್ರೀತಿಸುತಿದ್ದಳು. ಆದರೆ ಬಾಲಕಿಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಕಳೆದ ಮೂರು ದಿನದ ಹಿಂದ ಬಾಲಕಿ ಮನೆ ಬಿಟ್ಟು ಪ್ರಿಯಕರನ ಮನೆಯಲ್ಲಿ ತಂಗಿದ್ದಳು. ನಂತರ ಯುವಕನ ಪೋಷಕರು ನಗರದ ಮದೀನಾ ಜಮಾಯಿತ್ ಮಸೀದಿಯಲ್ಲಿ ಧರ್ಮ ಗುರುಗಳ ಮುಂದೆ ವಿವಾಹ ನೆರವೇರಿಸಲು ಇಂದು ತೆರಳಿದ್ದರು .ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದು ಯುವಕನನ್ನು ಪೊಲೀಸರ ವಶಕ್ಕೆ ನೀಡಿ ಬಾಲಕಿಯನ್ನು ತಮ್ಮ ವಶಕ್ಕೆ ಪಡೆದಿದ್ದು, ಅಪ್ರಾಪ್ತೆ ಎಂಬ ಕಾರಣಕ್ಕೆ ಜಿಲ್ಲಾ ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com