Hyderabad : ‘ ನನ್ನ ಮೆದುಳೇ ನನ್ನ ಶತ್ರು ‘ : ಡೆತ್ ನೋಟ್ ಬರೆದಿಟ್ಟು TV ನಿರೂಪಕಿ ಆತ್ಮಹತ್ಯೆ

ಟಿವಿ ನಿರೂಪಕಿಯೊಬ್ಬರು 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣಾ ರಾಜಧಾನಿ ಹೈದರಾಬಾದ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಅತಿಯಾದ ಖಿನ್ನತೆಯಿಂದ ಬಳಲುತ್ತಿದ್ದ 36 ವರ್ಷದ ಟಿವಿ ನಿರೂಪಕಿ ರಾಧಿಕಾ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಸಾಯಂಕಾಲ ಕಚೇರಿಯಿಂದ ಕೆಲಸ ಮುಗಿಸಿಕೊಂಡು ಹಿಂತಿರುಗಿದ ರಾಧಿಕಾ, ತಾವು ವಾಸಿಸುತ್ತಿದ್ದ ಕಟ್ಟಡದ 5ನೇ ಮಹಡಿಯಿಂದ ಜಿಗಿದಿದ್ದಾರೆ. ತಲೆಗೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ರಾಧಿಕಾ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಪೋಲೀಸರಿಗೆ ಡೆತ್ ನೋಟ್ ಒಂದು ದೊರೆತಿದ್ದು, ಅದರಲ್ಲಿ ‘ ನನ್ನ ಮೆದುಳೇ ನನ್ನ ಶತ್ರು ‘ ಎಂದು ಬರೆಯಲಾಗಿದೆ.

ಕೇವಲ 6 ತಿಂಗಳ ಹಿಂದಷ್ಟೇ ರಾಧಿಕಾ ವಿಚ್ಛೇದನವಾಗಿತ್ತು. ಆ ಬಳಿಕ ತಮ್ಮ 14 ವರ್ಷದ ಮಗನೊಂದಿಗೆ ತಂದೆ-ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು. ಕುಕ್ಕಟಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com