ಕಾಮನ್ವೆಲ್ತ್ ಗೇಮ್ಸ್ 2018 : ಸ್ಕ್ವಾಷ್ ಆಟಗಾರ್ತಿ ದೀಪಿಕಾಗೆ ಶುಭಕೋರಿದ ಪತಿ ಕಾರ್ತಿಕ್

ಆಸ್ಟ್ರೇಲಿಯಾದಲ್ಲಿ ಏಪ್ರಿಲ್ 4 ರಿಂದ 2018ನೇ ಸಾಲಿನ ಕಾಮನ್ವೆಲ್ತ್ ಕ್ರೀಡಾಕೂಟ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಗೋಲ್ಡ್ ಕೋಸ್ಟ್ ನಗರ ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸಲಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತದ ಸ್ಕ್ವಾಷ್ ತಂಡದ ಸದಸ್ಯೆಯಾಗಿ ದೀಪಿಕಾ ಪಲ್ಲಿಕಲ್ ಆಸ್ಟ್ರೇಲಿಯಾ ನಾಡಿಗೆ ತೆರಳಲಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟರ್ ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್ ಅವರಿಗೆ ಕಾಮನ್ ವೆಲ್ತ್ ಕ್ರೀಡಾಕೂಟಕ್ಕಾಗಿ ಶುಭಕೋರಿದ್ದಾರೆ.

ಟ್ವೀಟ್ ಮಾಡಿರುವ ದಿನೇಶ್ ಕಾರ್ತಿಕ್ ‘ ಗ್ಲಾಸ್ಗೋದಲ್ಲಿ 4 ವರ್ಷಗಳ ಹಿಂದೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ನಲ್ಲಿ ದೀಪಿಕಾ ಚಿನ್ನದ ಪದಕ ಗೆದ್ದಿದ್ದಳು. ಅಲ್ಲಿಂದ ಹಿಂದಿರುಗುವಾಗ ಇಬ್ಬರೂ ಒಂದೇ ವಿಮಾನದಲ್ಲಿ ಪ್ರಯಾಣಿಸುವಾಗ ಪರಸ್ಪರ ಭೇಟಿಯಾಗಿದ್ದೆವು. ಈಗಲೂ ಚಿನ್ನವನ್ನೇ ಗೆದ್ದು ಬರಲಿ ಎಂದು ಆಶಿಸುತ್ತೇನೆ ‘ ಎಂದು ಶುಭಹಾರೈಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com