ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಅಸ್ಥಿಪಂಜರದ ಬಳಿ ನಿರೋಧ್‌ಗಳು ಪತ್ತೆ !

 

ಚಿಕ್ಕಬಳ್ಳಾಪುರ : ದಲಿತ ಕುಟುಂಬದ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದು. ನಾಪತ್ತೆಯಾದ 25ನೇ ದಿನಕ್ಕೆ ಯುವತಿಯ ಮೂಳೆಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಡಿಗಾನಹಳ್ಳಿಯ 27 ವರ್ಷದ ಅನಿತಾ ಶವವಾಗಿ ಸಿಕ್ಕಿದ್ದಾಳೆ. ಮಾರ್ರಂಚ್ದು‌ 4ನೇ ತಾರೀಕಿನಂದು ಅನಿತಾ, ಗಾರ್ಮೆಂಟ್ಸ್ ಗೆಂದು ಮನೆಯಿಂದ ಹೋದವಳು ನಾಪತ್ತೆಯಾಗಿದ್ದಳು. ಬಳಿಕ ಕುಟುಂಬಸ್ಥರು ಮಂಚೇನಹಳ್ಳಿ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಮಾರ್ಚ್‌ 31ರಂದು  ಹನುಮೇನಹಳ್ಳಿಯ ರೈಲ್ವೆ ಗೇಟ್ ಬಳಿ ಬೆತ್ತಲೆಯ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೆಟ್ರೋಲ್ ಸುರಿದು ಶವವನ್ನು ಸುಡಲಾಗಿದ್ದು. ಶವದ ಬಳಿ ಆಕೆಯ ಗಾರ್ಮೆಂಟ್ಸ್ ಐಡಿ ಕಾರ್ಡ್. ATM ಕಾರ್ಡ್. ಟಿಫನ್ ಬಾಕ್ಸ್ ಪತ್ತೆಯಾಗಿದೆ. ಅಲ್ಲದೆ 12 ನಿರೋಧ್ ಗಳು ಸ್ಥಳದಲ್ಲಿ ಪತ್ತೆಯಾಗಿದ್ದು . ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಮೃತಳ ಕುಟುಂಬ ಮತ್ತು ದಲಿತ ಸಂಘಟನೆಗಳು ಆರೋಪ ಮಾಡುತ್ತಿದೆ.

ಆರೋಪಿಗಳನ್ನ ಶೀಘ್ರ ಬಂಧಿಸಿ ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಎಸ್ಪಿ ಆರೋಪಿಗಳನ್ನ ಶೀಘ್ರದಲ್ಲೆ ಬಂಧಿಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published.