ರಾಜಕೀಯಕ್ಕೆ ಕಿಚ್ಚನ ಎಂಟ್ರಿ ? : ಕುತೂಹಲ ಕೆರಳಿಸಿದೆ HDK, ಸುದೀಪ್‌ ಭೇಟಿ

ಬೆಂಗಳೂರು : ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ಈಗಾಗಲೆ ಎಲ್ಲಾ ಪಕ್ಷಗಳು ಗೆಲ್ಲುವ ಕಸರತ್ತು ಆರಂಭಿಸಿವೆ. ಈ ಮಧ್ಯೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.

 
ಬೆಂಗಳೂರಿನಲ್ಲಿರುವ ಎಚ್‌ಡಿಕೆ ಅವರ ನಿವಾಸಕ್ಕೆ ಸುದೀಪ್ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಸಹ ಜೊತೆಗಿದ್ದು, ಬೆಳಗ್ಗಿನ ಉಪಹಾರವನ್ನು ಎಚ್‌ಡಿಕೆ ಅವರ ಮನೆಯಲ್ಲೇ ಸವಿದಿರುವುದಾಗಿ ತಿಳಿದುಬಂದಿದೆ.
ಈ ಕುರಿತ ಫೋಟೋಗಳು ಸಾಮಾಜಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ ಸುದೀಪ್‌ ಜೆಡಿಎಸ್‌ಗೆ ಸೇರುತ್ತಾರೆಯೇ ಅಥವಾ ಪಕ್ಷದ ಪರ ಪ್ರಚಾರ ಮಾಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಎಚ್‌ಡಿಕೆ ಹಾಗೂ ಸುದೀಪ್‌ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com