‘ಕಾಂಗ್ರೆಸ್ ಏಜೆಂಟ್​ರಂತೆ ವರ್ತನೆ ‘ : ಅನಿಲ್ ಮೆಣಸಿನಕಾಯಿ ಆರೋಪ ತಳ್ಳಿ ಹಾಕಿದ ಗದಗ DC

ಗದಗ : ಗದಗ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ನಗರದಲ್ಲಿ ಕಾಂಗ್ರೆಸ್ ಏಜೆಂಟ್​ರಂತೆ ವರ್ತಿಸುತ್ತಿದ್ದಾರೆಂಬ ಆರೋಪವನ್ನು ಜಿಲ್ಲಾಧಿಕಾರಿ ಮನೋಜ್ ಜೈನ್ ತಳ್ಳಿ ಹಾಕಿದ್ದಾರೆ.

ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಮಾಡಿದ್ದ ಆರೋಪಕ್ಕೆ ಜಿಲ್ಲಾಧಿಕಾರಿ ಮನೋಜ್ ಜೈನ್ ಇಂದು ಪ್ರತಿಕ್ರಿಯಿಸಿದ್ದು, ನಾನು ಸೇರಿದಂತೆ ಎಸಿ ಮಂಜುನಾಥ್, ಡಿವೈಎಸ್ಪಿ ವಿಜಯಕುಮಾರ್ ರಾತ್ರಿ ವೇಳೆ ಸಚಿವರನ್ನು ಬೇಟಿಮಾಡಿಲ್ಲ. ಅವರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಅಧಿಕಾರಿಗಳು ಯಾರನ್ನು ಭೇಟಿ ಮಾಡಿಲ್ಲ. ಅಷ್ಟಕ್ಕೂ ನೀತಿ ಸಂಹಿತೆ ಜಾರಿಯಾದ ಬಳಿಕ ಸಚಿವ ಎಚ್.ಕೆ. ಪಾಟೀಲ್ ಗದಗ ಜಿಲ್ಲೆಗೆ ಆಗಮಿಸಿಲ್ಲ ಎಂದು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com