ಅಗರಬತ್ತಿ ಕಂಪನಿಯಿಂದ ಗೋಲ್ಡನ್‌ ಸ್ಟಾರ್‌ಗೆ 75 ಲಕ್ಷ ಪರಿಹಾರ : ಕಾರಣವೇನು ?

ಬೆಂಗಳೂರು : ಅನುಮತಿಯಿಲ್ಲದೇ ಅಗರಬತ್ತಿ ಪ್ರಚಾರದ ಜಾಹೀರಾತಿಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಫೋಟೋ ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಗಣೇಶ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಗಣೇಶ್‌ ಅವರಿಗೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ಮೋಕ್ಷ್‌ ಅಗರಬತ್ತಿ ಕಂಪನಿ ಗಣೇಶ್‌ ಅವರ ಅನುಮತಿಯಿಲ್ಲದೆ ಅವರ ಭಾವಚಿತ್ರವನ್ನು ಬಳಸಿಕೊಂಡಿತ್ತು. ಇದಕ್ಕೆ ಗಣೇಶ್‌ ಅವರ ಬಳಿ ಒಪ್ಪಿಗೆ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ 75 ಲಕ್ಷ ರೂ ಪರಿಹಾರ ಕೋರಿ ಗಣೇಶ್ ಸಿವಿಲ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ಇಂದು ಪ್ರಕರಣದ ತೀರ್ಪು ಹೊರಬಿದ್ದಿದ್ದು. ಗಣೇಶ್‌ ಅವರಿಗೆ 75 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com