ದಕ್ಷಿಣ ಕನ್ನಡ : ಉಗ್ರರ ಸದೆಬಡಿದ ಯೋಧ ಜುಬೇರ್ ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಲಶ್ಕರ್ ಉಗ್ರರನ್ನ ಸದೆಬಡಿದಿದ್ದ ದಕ್ಷಿಣ ಕನ್ನಡದ ಯೋಧನಿಗೆ ಹುಟ್ಟೂರಲ್ಲಿ ಇಂದು ಭರ್ಜರಿ ಸ್ವಾಗತ ದೊರೆತಿದೆ. ತಿಂಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಲಷ್ಕರೇ ತೊಯ್ಬಾ ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೇರಂಕಿಯ ಯೋಧ ಜುಬೇರ್ ಪಾಲ್ಗೊಂಡಿದ್ದರು.

ಜುಬೇರ್ ಇದ್ದ ಯೋಧರ ತಂಡ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ಸದೆಬಡಿದಿತ್ತು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಯೋಧ ಜುಬೇರ್ ಇಂದು ಹುಟ್ಟೂರಿಗೆ ಬಂದಿದ್ದರು. ಈ ವೇಳೆ ಅವರನ್ನು ‌ಆತ್ಮೀಯವಾಗಿ‌ ಬರಮಾಡಿಕೊಂಡ ಗ್ರಾಮಸ್ಥರು ವಾಹನದಲ್ಲಿ ‌ಮೆರವಣಿಗೆ ನಡೆಸಿ ಸನ್ಮಾನ ಮಾಡಿ ಯೋಧನ ದೇಶಪ್ರೇಮವನ್ನು ಕೊಂಡಾಡಿದರು.

Leave a Reply

Your email address will not be published.