ಮೋಸದ ನೆರವಿಲ್ಲದೆಯೇ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಿದೆ : ವಕಾರ್ ಯೂನಿಸ್

‘ ಬಾಲ್ ಟ್ಯಾಂಪರಿಂಗ್ ಅಥವಾ ಇನ್ನಾವುದೇ ರೀತಿಯ ಮೋಸವನ್ನು ಮಾಡದೇ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಬಹುದಾಗಿದೆ ‘ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಹೇಳಿದ್ದಾರೆ.

‘ ಯಾವುದೇ ರೀತಿಯ ಮೋಸ ಮಾಡದೇ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಖಂಡಿತ ಸಾಧ್ಯವಿದೆ. ಇಂದಿನ ಕಾಲದಲ್ಲಿ ಹಲವು ಬೌಲರ್ ಗಳು ರಿವರ್ಸ್ ಸ್ವಿಂಗ್ ಮಾಡಿ ವಿಕೆಟ್ ಪಡೆಯುತ್ತಿದ್ದಾರೆ. ಆ ಮೂಲಕ ತಮ್ಮ ತಂಡದ ಗೆಲುವಿಗೆ ಕಾರಣವಾಗುತ್ತಿದ್ದಾರೆ ‘ ಎಂದು ವಕಾರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಮಡಗಳ ನಡುವೆ ಕೇಪ್ ಟೌನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದ ಜವಾಬ್ದಾರಿಯನ್ನು ಹೊತ್ತುಕೊಂಡು ಸ್ಟೀವ್ ಸ್ಮಿತ್ ನಾಯಕನ ಸ್ಥಾನಕ್ಕೆ ಹಾಗೂ ಉಪನಾಯಕನ ಸ್ಥಾನಕ್ಕೆ ಡೇವಿಡ್ ವಾರ್ನರ್ ರಾಜೀನಾಮೆ ನೀಡಿದ್ದರು.

Leave a Reply

Your email address will not be published.