ವಿಜಯಪುರ : ಅಪಾಯಕಾರಿ ಮೌಢ್ಯಾಚರಣೆ ಜೀವಂತ : ರಥದ ಮೇಲಿಂದ ಮಕ್ಕಳನ್ನು ಎಸೆದ ಭಕ್ತರು

ವಿಜಯಪುರ‌ ಜಿಲ್ಲೆಯಲ್ಲಿ ಅಪಾಯಕಾರಿ ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರದ ದಿಗಂಭರೇಶ್ವರ ಜಾತ್ರೆಯಲ್ಲಿ ರಥದಿಂದ ಪುಟ್ಟ ಮಕ್ಕಳನ್ನು ಎಸೆಯುವ ಕಂದಾಚಾರ ನಡೆದಿದೆ.

ಭಕ್ತರು ರಥದ ಮೇಲಿಂದ ಪುಟ್ಟ ಪುಟ್ಟ ಮಕ್ಕಳನ್ನು ಕೆಳಗೆ ಎಸೆದಿದ್ದಾರೆ. ಹರಕೆ ತೀರಿಸಲು ಮೌಡ್ಯಾಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಸುಮಾರು ‌20 ಅಡಿ ಮೇಲಿಂದ ಮಕ್ಕಳನ್ನು ಕೆಳಗೆ ಎಸೆದಿದ್ದಾರೆ. ಸ್ಥಳದಲ್ಲಿ ಮಾಜಿ‌‌ ಸಚಿವ ಎಸ್ ಕೆ ಬೆಳ್ಳುಬ್ಬಿ ಹಾಜರಿದ್ದರು.

ಮೌಡ್ಯಾಚರಣೆ ಹರಕೆ ತೀರಿಸುವುದಕ್ಕೆ ಮಾಜಿ ಸಚಿವ ಬೆಳ್ಳುಬ್ಬಿ ತಡೆ ಹಾಕದೇ ಸುಮ್ಮನಿದ್ದರು. ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಣ್ಮುಚ್ಚಿ ಕುಳಿತಿದೆ.

Leave a Reply

Your email address will not be published.

Social Media Auto Publish Powered By : XYZScripts.com