Rajya Sabha : 6 ವರ್ಷದ ಸಂಬಳವನ್ನು PM ಪರಿಹಾರ ನಿಧಿಗೆ ದೇಣಿಗೆ ನೀಡಿದ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ರಾಜ್ಯಸಭಾ ಸದಸ್ಯತ್ವದ 6 ವರ್ಷಗಳ ಅವಧಿ ಪೂರ್ಣಗೊಂಡಿದ್ದು, ತಾವು ಪಡೆದ ಸಂಪೂರ್ಣ ಸಂಬಳವನ್ನು ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

6 ವರ್ಷಗಳ ಕಾಲಾವಧಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸಂಬಳ ಹಾಗೂ ತಿಂಗಳ ಭತ್ತೆಯ ರೂಪದಲ್ಲಿ ಒಟ್ಟು 90 ಲಕ್ಷ ರೂಪಾಯಿಗಳನ್ನು ಪಡೆದಿದ್ದರು. ಈಗ 90 ಲಕ್ಷ ರೂ ಮೊತ್ತವನ್ನು ಸಚಿನ್ ತೆಂಡೂಲ್ಕರ್ ಪ್ರಧಾನಿಯವರ ಪರಿಹಾರ ನಿಧಿಗೆ ದೇಣಿಗೆಯನ್ನಾಗಿ ನೀಡಿದ್ದಾರೆ.

ಸಚಿನ್ ನೀಡಿರುವ ದೇಣಿಗೆಯ ಕುರಿತು ಪ್ರಧಾನಿ ಕಚೇರಿಯಿಂದ ಆಧಿಕೃತ ಪ್ರತಿಕ್ರಿಯೆ ಬಂದಿದ್ದು, ‘ ಪ್ರಧಾನ ಮಂತ್ರಿಯವರು ನಿಮ್ಮ ಈ ವಿಚಾರಶೀಲ ನಡೆಯನ್ನು ಸ್ವಾಗತಿಸಿದ್ದಾರೆ. ಇಂತಹ ಕೊಡುಗೆಗಳಿಂದ ಕಷ್ಟದಲ್ಲಿ ಇರುವವರ ಸಹಾಯಕ್ಕೆ ನೆರವಾಗುತ್ತದೆ ‘ ಎಂದು ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com