ಹನುಮ ಜಯಂತಿ ದಿನವೇ 16 ದಿನದ ಹಸುಗೂಸನ್ನು ಕದ್ದೊಯ್ದ ಮಂಗ…!!

ಭುವನೇಶ್ವರ್‌ : ಒರಿಸ್ಸಾದ ಕಟಕ್‌ ಜಿಲ್ಲೆಯಲ್ಲಿ 16 ದಿನಗಳ ಮಗುವನ್ನು ಮಂಗವೊಂದು ಹೊತ್ತೊಯ್ದ ಘಟನೆ ನಡೆದಿದೆ. ತಲಬಸ್ತಾ ಗ್ರಾಮದ ಸಮೀಪವಿರುವ ಕಾಡಿನಲ್ಲಿ ಈ ಘಟನೆ ನಡೆದಿದೆ.

ರಾಮಕೃಷ್ಣ ನಾಯಕ್‌ ದಂಪತಿ ಮಗು ಪೋಷಕರ ಜೊತೆಯೇ ಮಲಗಿತ್ತು. ಬೆಳಗಾದ ಕಾರಣ ತಾಯಿ ಎದ್ದು ಮುಖ ತೊಳೆಯಲು ಹೋಗಿದ್ದಾರೆ. ರಾಮಕೃಷ್ಣ ನಾಯಕ್ ಮಗುವಿನ ಬಳಿಯೇ ಮಲಗಿದ್ದ ವೇಳೆ ಮನೆಯ ಕೋಣೆಯೊಳಗೆ ನುಗ್ಗಿದ ಮಂಗ ಮಗುವನ್ನು ಎತ್ತಿಕೊಂಡು ಕಾಡಿನೊಳಗೆ ಹೋಗಿದೆ ಎಂದು ಮಗುವಿನ ಕುಟುಂಬಸ್ಥರು ತಿಳಿಸಿದ್ದಾರೆ.

ಸದ್ಯ ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಗುವಿನ ಹುಡುಕಾಟ ನಡೆಸಿದ್ದು, ಇದುವರೆಗೂ ಮಗು ಪತ್ತೆಯಾಗಿಲ್ಲ. ಮಗುವನ್ನು ಹುಡುಕಲು ಮೂರು ತಂಡಗಳನ್ನು ರಚಿಸಿದ್ದು, ಮಗುವಿನ ಹುಡುಕಾಟ ನಡೆಸುತ್ತಿದ್ದೇವೆ. ಇನ್ನೂ ಮಗುವಿನ ಸುಳಿವು ಪತ್ತೆಯಾಗಿಲ್ಲ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಮತ್ತೊಂದೆಡೆ ಮಗು ಸುರಕ್ಷಿತವಾಗಿ ಪತ್ತೆಯಾಗಲೆಂದು ದೇವರ ಮೊರೆ ಹೋಗಿದ್ದು, ಪೂಜೆ, ಹೋಮಗಳನ್ನು ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದ ಒರಿಸ್ಸಾದ ಅನೇಕ ಪ್ರದೇಶಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು, ಅನೇಕರ ಮೇಲೆ ದಾಳಿ ಮಾಡಿದ್ದವು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com