ಕೊಪ್ಪಳ : ಅನಧಿಕೃತವಾಗಿ ನಕಲಿ ಸ್ಪಿರಿಟ್ ಸಾಗಣೆ : ಮೂವರ ಬಂಧನ

ಕೊಪ್ಪಳ : ಅನಧಿಕೃತವಾಗಿ ನಕಲಿ ಸ್ಪಿರಿಟ್ ಸಾಗಿಸುತ್ತಿದ್ದ ಮೂವರನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೋಲೀಸರನ್ನು ಬಂಧಿಸಿದ್ದಾರೆ. ಆದರೆ ಇಬ್ಬರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮೇಶ್, ಹಬೀಬ್, ಲಕ್ಷ್ಮಣ ಎಂಬುವವರನ್ನು ಬಂಧಿಸಲಾಗಿದೆ. ವಿನೋದ್ ಹಾಗೂ ರೋಹಿತ್ ಪರಾರಿ‌ಯಾಗಿದ್ದಾರೆ. ಬಂಧಿತರಿಂದ 1 ಲಕ್ಷ 90 ಸಾವಿರ ಮೌಲ್ಯದ 930 ಲೀಟರ್ ನಕಲಿ ಸ್ಪಿರಿಟ್ ವಶ‌‌‌‌ಪಡಿಸಿಕೊಳ್ಳಲಾಗಿದೆ.

ಹೊಸಪೇಟೆ – ಕುಷ್ಡಗಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಖದೀಮರು ಸ್ಪಿರಿಟ್ ಸಾಗಿಸುತ್ತಿದ್ದರು. ನಕಲಿ ಸ್ಪಿರಿಟ್ ಸಾಗಿಸುತ್ತಿದ್ದ ಬುಲೆರೋ ವಾಹನವನ್ನು ಪೊಲೀಸರು‌ ಜಪ್ತಿ ಮಾಡಿಕೊಂಡಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com