ಭಾನುವಾರದ ಭರ್ಜರಿ ಬೇಟೆ : ಕಾಶ್ಮೀರದಲ್ಲಿ ಏಳು ಉಗ್ರರನ್ನು ಹೊಡೆದು ಕೊಂದ ಸೇನೆ

ಶ್ರೀನಗರ : ಜಮ್ಮು-ಕಾಶ್ಮೀರದ ಪ್ರತ್ಯೇಕ 2 ಸ್ಥಳಗಳಲ್ಲಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 7 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಶೋಪಿಯಾನ್‌ ದ್ರಾಗದ್‌ ಹಾಗೂ ಕಚ್‌ದೋರಾ ಹಳ್ಳಿಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಹಾಗೂ ಲಷ್ಕರೆ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಶನಿವಾರ ಸಂಜೆಯಿಂದಲೇ ಎನ್‌ಕೌಂಟರ್‌ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸರು ಹಾಗೂ ಸೈನ್ಯದ 44 ರಾಷ್ಟ್ರೀಯ ರೈಫಲ್ಸ್‌, 3 ಹಾಗೂ 33 ರಾಷ್ಟ್ರೀಯ ರೈಫಲ್ಸ್‌ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಎರಡೂ ಪ್ರದೇಶಗಳಲ್ಲಿ ಉಗ್ರರು ಮನೆಯೊಳಗೆ ಅಡಗಿ ಕುಳಿತಿದ್ದರು ಎಂದು ತಿಳಿದುಬಂದಿದೆ. ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಕಡಿತಗೊಳಿಸಿದ್ದು, ಬಾರಾಮುಲ್ಲಾ ಹಾಗೂ ಬನ್ನಿಹಾಲ್‌ ಮಧ್ಯದ ರೈಲು ಸಂಚಾರವನ್ನು ತಡೆಹಿಡಿಯಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com