ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗೋದು ಕನಸು : ಡಿ.ಕೆ ಶಿವಕುಮಾರ್

ರಾಮನಗರ : ಕನಕಪುರದ ಕೊಳಗೊಂಡನಹಳ್ಳಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ‘ ವಿರೋಧ ಪಕ್ಷಗಳು ಕೂಡ ಇಲ್ಲಿನ ರಸ್ತೆ ಅಭಿವೃದ್ಧಿಯನ್ನು ಮೆಚ್ಚಿದ್ದಾರೆ. ಕನಕಪುರ ತಾಲೂಕು ಸಮಗ್ರ ಅಭಿವೃದ್ಧಿಯಾಗಿದೆ ‘ ಎಂದಿದ್ದಾರೆ.

‘ ಇಡೀ ದೇಶದಲ್ಲಿ ರಾಜ್ಯದ ಇಂಧನ‌ ಇಲಾಖೆ ಮಾದರಿ ಕೆಲಸವನ್ನ ನಾನು ಸಚಿವನಾದ ಮೇಲೆ ಮಾಡಿದೆ. ಇನ್ನು 25 ವರ್ಷಗಳ ಕಾಲ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರದು. ನನಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದೆ. ಅದ್ದರಿಂದ ನಾನು ಹೆಚ್ಚಾಗಿ ರಾಜ್ಯ ಪ್ರವಾಸ ಮಾಡಬೇಕಿದೆ. ನೀವೆ ಅಭ್ಯರ್ಥಿ ಎಂದು ತಿಳಿದು‌ ಈ ಚುನಾವಣೆಯಲ್ಲಿ ಕೆಲಸ ಮಾಡಿ. ನಾನು ವಿರೋಧ ಪಕ್ಷದವರಿಗೂ ತೊಂದ್ರೆ ಕೊಟ್ಟಿಲ್ಲ. ಅವರಿಗೂ ಸಿಗಬೇಕಾದ ಸವಲತ್ತುಗಳನ್ನ ಕೊಡಿಸಿದ್ದೇನೆ ‘

‘ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ವಾತಾವರಣ ಇದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಕನಸು. ನಾನು ಮಾತಿಗೆ ತಪ್ಪಿಲ್ಲ, ನುಡಿದಂತೆ ನಡೆದಿದ್ದೇನೆ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ‘ ಎಂದು ಡಿಕೆಶಿ ಮತದರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com