ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ : ಚಲುವರಾಯ ಸ್ವಾಮಿ

ಮಂಡ್ಯದಲ್ಲಿ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕುವಷ್ಟು ದೊಡ್ಡವರಲ್ಲ ನಾವು. ಈ ದೇಶ ಆಳಿದವರು, ರಾಜ್ಯ ಆಳಿದವರು. ಅವರಿಗೆ ನಾವು ಸವಾಲು ಹಾಕಲ್ಲ. ಮತದಾರರೇ ಉತ್ತರ ಕೊಡುತ್ತಾರೆ ‘ ಎಂದಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತೇವೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುತ್ತೇವೆ. ಏಪ್ರಿಲ್ ೨೦ ರಂದು ನಾಗಮಂಗಲ ದಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಅಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಅಂದೇ ನಾಮಪತ್ರ ಸಲ್ಲಿಸಲು ಯೋಚನೆ ಮಾಡಲಾಗಿದೆ. ಚುನಾವಣೆ ತಯಾರಿ ನಡೆಸಲಾಗುತ್ತಿದೆ ‘ ಎಂದು ಮಂಡ್ಯದಲ್ಲಿ ಚಲುವರಾಯಸ್ವಾಮಿ ಹೇಳಿದ್ದಾರೆ.

Leave a Reply

Your email address will not be published.