ಬಳ್ಳಾರಿ : ಕೌಟುಂಬಿಕ ಕಲಹ ಹಿನ್ನೆಲೆ : ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಗಂಡ

ಬಳ್ಳಾರಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ ತನ್ನ ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದ ಗಂಡ ಶವವನ್ನು ಎಳೆದುಕೊಂಡು ಬಂದು ಕಾಲುವೆಗೆ ಹಾಕಿದ್ದಾನೆ.

ಉಮೇಶ ಎಂಬುವವನಿಂದ ಕೃತ್ಯ ನಡೆದಿದ್ದು, ಹೆಂಡತಿ ಶಶಿಕಲಾ (21) ಸಾವನಪ್ಪಿದ ದುರ್ದೈವಿಯಾಗಿದ್ದಾಳೆ. ಸಾರ್ವಜನಿಕರು ಶವವನ್ನು ನೋಡಲು ಮುಗಿಬಿದ್ದಿದ್ದಾರೆ. ಕೊಲೆ ಮಾಡಿದ ಗಂಡ ತಾನೇ ಪೊಲೀಸರೀಗೆ ಶರಣಾಗಿದ್ದಾನೆ.

ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಂಪ್ಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com