ಟಗರು ಮಾನ್ವಿತಾ ಮೇಲೆ ರಾಂ ಗೋಪಾಲ್‌ ವರ್ಮಾ ಕಣ್ಣು : ಬಂಪರ್ ಆಫರ್‌ ನೀಡಿದ ನಿರ್ದೇಶಕ

ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಈಗಾಗಲೆ ಭರ್ಜರಿ ಯಶಸ್ಸು ಸಾಧಿಸಿದ್ದು, ಸಿನಿಮಾದಲ್ಲಿ ಎಲ್ಲರ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ.
ಅಲ್ಲದೆ ಟಗರು ಸಿನಿಮಾ ನೋಡಿರುವ ಖ್ಯಾತ ನಿರ್ದೇಶಕ ರಾಂ ಗೋಪಾಲ್‌ ವರ್ಮಾ ಸಹ ನಿರ್ದೇಶಕ ಸೂರಿ ಹಾಗೂ ಇತರೆ ಕಲಾವಿದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಅಲ್ಲದೆ ಟಗರು ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಮಾನ್ವಿತ (ಪುನರ್ವಸು) ಅವರಿಗೆ ರಾಂ ಗೋಪಾಲ್‌ ವರ್ಮಾ, ಆಫರ್‌ ನೀಡಿದ್ದು, ತಮ್ಮ ಸಿನಿಮಾದಲ್ಲಿ ಮಾನ್ವಿತ ಅವರಿಗೆ ಅವಕಾಶ ನೀಡುವುದಲ್ಲದೆ, ಅವರು ಕೇಳಿದ್ದಕ್ಕಿಂತ ಹೆಚ್ಚಿನ ಸಂಭಾವನೆ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಬ್ಯಾನರ್‌ನಲ್ಲೇ ಸಿನಿಮಾ ನಿರ್ದೇಶಿಸುವಂತೆ ಸೂರಿಗೂ ಹೇಳಿದ್ದಾರೆ.
ಅಲ್ಲದೆ ಕನ್ನಡದಲ್ಲಿ ತೆರೆಕಂಡಿದ್ದ ಕಡ್ಡಿಪುಡಿ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್‌ ಮಾಡಲು ರಾಂ ಗೋಪಾಲ್‌ ವರ್ಮಾ ಒಪ್ಪಿದ್ದು, ಶಿವರಾಜ್‌ ಕುಮಾರ್‌ ನಿರ್ವಹಿಸಿದ ಪಾತ್ರವನ್ನು ನಾಗಾರ್ಜುನ ಅಕ್ಕಿನೇನಿ ಅವರಿಂದ ಮಾಡಿಸುವುದಾಗಿಯೂ ಹೇಳಿದ್ದಾರೆ.
ನಾಗಾರ್ಜುನ ಅವರ ಕಾಲ್‌ ಶೀಟ್‌ ಸಿಕ್ಕಿದಲ್ಲಿ ಕಡ್ಡಿಪುಡಿ ಸಿನಿಮಾ ತೆಲುಗಿನಲ್ಲಿ ರಿಮೇಕ್‌ ಆಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com