ಈ CM ಮೈಸೂರು ಕಾಡು, ರೆಸಾರ್ಟ್‌ನಲ್ಲಿ ಕುಡಿದು ಕುಪ್ಪಳಿಸೋದೇ ಆಯ್ತು : ಪ್ರತಾಪ್ ಸಿಂಹ

ಮೈಸೂರು : ಅಮಿತ್ ಶಾನ ಗಡಿಪಾರು ಮಾಡಿ ಚುನಾವಣಾ ಸಮಯದಲ್ಲಿ ಅವರು ಇಲ್ಲಿರಬಾರದು ಎಂದಿದ್ದ ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ವಿರುದ್ದ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಮೃತ ರಾಜುಗೆ ಪರಿಹಾರ ನೀಡಿರೋ ವಿಚಾರ ಸಂಬಂಧ ಮಾತನಾಡಿದ ಪ್ರತಾಪ್ ಸಿಂಹ, ಕೋಡ್ ಆಫ್ ಕಂಡೆಕ್ಟ್ ಅಂತೀರಲ್ಲ ನಾವು ಕಾಂಗ್ರೆಸ್ ಪಕ್ಷದ ಹಣ ಕೊಟ್ಟಿದ್ವಾ? ಒಂದು ವೇಳೆ ಕೊಟ್ಟಿದ್ದರು ಅದು ಪಕ್ಷದ ಕಾರ್ಯಕರ್ತನ ಸಾವಿಗೆ ಸಾಂತ್ವನ ಹೇಳಿದ್ದೇವೆ. ಇದು ಕಾರ್ಯಕರ್ತನ ಹತ್ಯೆಯಿಂದ ನೊಂದಿರುವವರಿಗೆ ಧೈರ್ಯತುಂಬುವ ಕೆಲಸವಷ್ಟೇ ಎಂದಿದ್ದಾರೆ.
ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಇದು ಕೋಡ್ ಆಪ್ ಕಂಡೆಕ್ಟ್ ಆಗೋಲ್ಲ. ನಾವು ರಾಜು ಕುಟುಂಬಕ್ಕೆ ಹಣ ಕೊಟ್ಟಿರುವ ಬಗ್ಗೆ ಫ್ರೂಫ್ ತೋರಿಸಲಿ. ಸಿದ್ದರಾಮಯ್ಯ ಯಾವಾಗ್ಲೂ ಮೈಸೂರು ಕಾಡಿನಲ್ಲಿ ರೆಸಾರ್ಟ್ ನಲ್ಲಿ ಕುಡಿದು ಕುಪ್ಪಳಿಸುತ್ತಾರೆ. ಮೈಸೂರಿನ ಬಗ್ಗೆ ಬಹಳ ಪ್ರೀತಿ ಅಂತಾರೆ ಇದೇನಾ ಸಿದ್ದರಾಮಯ್ಯನ ಪ್ರೀತಿ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕಾರ್ಯಕರ್ತ ರಾಜು ಕೊಲೆಮಾಡಿದ ಹಂತಕ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಅಲ್ಲದೆ ಸಂಸದರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ಹೇಳಲಾಗ್ತಿದೆ. ನಾವು ಕೂಡ ಈಗ ಭಯದ ವಾತಾವರಣದಲ್ಲಿ ಓಡಾಡಬೇಕಿದೆ. ರಾಜು ಹಂತಕನ ಚಾರ್ಜ್ ಶೀಟ್ ಡಮ್ಮಿ ಮಾಡಿಸಿ ಅವನ ಬಿಡುಗಡೆಯಾಗುವಂತೆ ಮಾಡಿರೋದು ಈ ಸಿಎಂ, ನಮ್ಮ ಕಾರ್ಯಕರ್ತರ ಸಾವಿನ ನೋವು ನಮಗೆ ಗೊತ್ತಿದೆ. ದಿನೇಶ್ ಗುಂಡೂರಾವ್ ಅವರು ಎಷ್ಟೇ ಕೇಸ್ ಹಾಕಲಿ ನಮಗೆ ಭಯವಿಲ್ಲ. ಅವರಿಗೆ ನಾನು ಮತ್ತೊಮ್ಮೆ ಎಚ್ಚರಿಕೆ ನೀಡುತಿದ್ದೇನೆ ಇಂತಹ ಹೇಳಿಕೆಗಳು ನೀಡೋದು ಸರಿಯಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com