ಹುಬ್ಬಳ್ಳಿ ಪಾಕಿಸ್ತಾನದಂತಿದೆ, ಮಸೀದಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಇವೆ ಎಂದ ಪ್ರಹ್ಲಾದ್‌ ಜೋಷಿ!

ಹುಬ್ಬಳ್ಳಿ : ‘ಇಡೀ ಕಸಬಾಪೇಟೆ ಪಾಕಿಸ್ತಾನದಂತೆ ಕಾಣ್ತಿದೆ’. ‘ಇಲ್ಲಿನ  ಮಸೀದಿಯಲ್ಲಿ ಅಕ್ರಮ ಮಾರಕಾಸ್ತ್ರಗಳ ಸಂಗ್ರಹ ಇವೆ ಎಂದು ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
‘ಪಾಕ್ ನಂತಹ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ’ ‘ಕೂಡಲೇ ಎಲ್ಲ ಮಸೀದಿಗಳು ತಪಾಸಣೆ ನಡೆಸಬೇಕು’ ಎಂದಿದ್ದು, ಈ ಹೇಳಿಕೆ ಸಂಬಂಧ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲಾಗಿದೆ.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮಹ್ಮದ್ ಸಾಬ್ ಜೋಪಡಿ ಎಂಬುವರು ದೂರು ಸಲ್ಲಿಸಿದ್ದು, ದೂರು ಆಧರಿಸಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕಂಪ್ಲೇಂಟ್ ದಾಖಲಿಸಲಾಗಿದೆ.
ಕೆಲ ದಿನಗಳ ಹಿಂದೆ ಎರಡು ಗುಂಪಿನ ಮಧ್ಯ ನಡೆದ ಗಲಾಟೆಯಲ್ಲಿ ಗುರುಸಿದ್ಧಪ್ಪ ಅಂಬಿಗೇರ ಎಂಬುವವರ ಕೊಲೆಯಾಗಿತ್ತು. ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ನೆಪದಲ್ಲಿ ಪ್ರಹ್ಲಾದ್ ಜೋಷಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ನಿನ್ನೆ ಕಸಬಾಪೇಟೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com