IPL : ವಾರ್ನರ್ ಬದಲು ಸನ್ ರೈಸರ್ಸ್ ತಂಡಕ್ಕೆ ಅಲೆಕ್ಸ್ ಹೇಲ್ಸ್ ಸೇರ್ಪಡೆ

ಬಾಲ್ ಟ್ಯಾಂಪರಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ನಿಂದ ಒಂದು ವರ್ಷ ನಿಷೇಧ ಕ್ಕೊಳಗಾಗಿರುವ ಡೇವಿಡ್ ವಾರ್ನರ್ ಅವರ ಸ್ಥಾನಕ್ಕೆ ಇಂಗ್ಲೆಡಿನ ಆರಂಭಿಕ ಬ್ಯಾಟ್ಸಮನ್ ಅಲೆಕ್ಸ್ ಹೇಲ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ.

2018 ರ ಐಪಿಎಲ್ ನಲ್ಲಿ ಆಡದಂತೆ ಡೇವಿಡ್ ವಾರ್ನರ್ ಗೆ ಬಿಸಿಸಿಐ ಕೂಡ ನಿರ್ಬಂಧ ಹೇರಿತ್ತು. ಸನ್ ರೈಸರ್ಸ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಬದಲಿಗೆ ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ಹೈದರಾಬಾದ್ ಫ್ರಾಂಚೈಸಿ ನೇಮಿಸಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆದಿತ್ತು. ಪ್ರಕರಣದ ಜವಾಬ್ದಾರಿಯನ್ನು ಹೊತ್ತುಕೊಂಡು ಆಸ್ಟ್ರೇಲಿಯಾ ತಂಡದ ಉಪನಾಯಕನ ಸ್ಥಾನಕ್ಕೆ ಡೇವಿಡ್ ವಾರ್ನರ್ ರಾಜೀನಾಮೆ ನೀಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com