ಅಭಿಮಾನಿಗಳ ಕ್ಷಮೆ ಕೇಳಿದ ವಾರ್ನರ್ : ಮತ್ತೆ ಆಸ್ಟ್ರೇಲಿಯಾ ಪರ ಆಡದಿರಬಹುದು ಎಂದ ಕ್ರಿಕೆಟರ್

ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಶನಿವಾರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಡೇವಿಡ್ ವಾರ್ನರ್, ‘ ಮೂರನೇ ಟೆಸ್ಟ್ ಪಂದ್ಯದಲ್ಲಿ ನಡೆದ ಬಾಲ್ ಟ್ಯಾಂಪರಿಂಗ್ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ‘ ಎಂದಿದ್ದಾರೆ.

‘ ಕ್ರಿಕೆಟ್ ಆಡುವುದರ ಮೂಲಕ ದೇಶಕ್ಕೆ ಗೌರವ ತರಬೇಕೆಂದು ಪ್ರಯತ್ನಿಸಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಆದರೆ ಅದಕ್ಕೆ ಸಂಪೂರ್ಣ ವಿರುದ್ಧವಾದ ನಿರ್ಧಾರವನ್ನು ತೆಗೆದುಕೊಂಡು ತಪ್ಪು ಮಾಡಿದ್ದೇನೆ. ಈ ತಪ್ಪಿಗಾಗಿ ಬದುಕಿನ ಕೊನೆಯವರೆಗೂ ಪಶ್ಚಾತ್ತಾಪ ಪಡಲಿದ್ದೇನೆ ‘ ಎಂದು ಹೇಳಿದ್ದಾರೆ.

‘ ದೇಶಕ್ಕಾಗಿ ಆಡುವ ಹೆಮ್ಮೆಯ ಸಂಗತಿ. ಮತ್ತೆ ಆಸ್ಟ್ರೇಲಿಯಾ ಪರವಾಗಿ ಆಡುವ ಬಗ್ಗೆ ಒಂದು ಸಣ್ಣ ಆಶಾಕಿರಣ ಇದೆ. ಆದರೆ ನಾನು ಮತ್ತೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ತುಂಬ ಕಡಿಮೆಯಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com