ದೀಪಿಕಾ-ರಣವೀರ್‌ ಮದುವೆ ಡೇಟ್‌ ಫಿಕ್ಸ್‌ : ಬೆಂಗಳೂರಿನಲ್ಲೂ ನಡೆಯಲಿದ್ಯಂತೆ ಆರತಕ್ಷತೆ

ಮುಂಬೈ : ಬಾಲಿವುಡ್‌ನ ಲವ್‌ ಬರ್ಡ್ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್ ಅವರ ಮದುವೆ ಕುರಿತು ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ.
ಇತ್ತೀಚೆಗಷ್ಟೇ ದೀಪಿಕಾ ಮದುವೆಗಾಗಿ ತಮ್ಮ ತಾಯಿಯ ಜೊತೆ ಬೆಂಗಳೂರಿನಲ್ಲಿ ಒಡವೆಗಳನ್ನು ಶಾಪಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.

ಅದರ ಬೆನ್ನಲ್ಲೇ ದೀಪಿಕಾ -ರಣವೀರ್ ಮದುವೆ ಡೇಟ್‌ ಸಹ ಫಿಕ್ಸ್ ಆಗಿರುವುದಾಗಿ ತಿಳಿದುಬಂದಿದ್ದು, ಈ ವರ್ಷಾಂತ್ಯಕ್ಕೆ ಡಿಪ್ಪಿ ಹಾಗೂ ರಣವೀರ್‌ ಹಸೆಮಣೆ ಏರಲಿದ್ದಾರೆ.
ಸದ್ಯ ಬಾಲಿವುಡ್‌ ಮೂಲಗಳ ಪ್ರಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಡಿಪ್ಪಿ-ರಣವೀರ್‌ ಮದುವೆ ನಡೆಯಲಿದೆ. ಮುಂಬೈನಲ್ಲಿ ಮದುವೆ ನಡೆಯಲಿದ್ದು, ದಕ್ಷಿಣ ಭಾರತದ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ರಿಸೆಪ್ಷನ್‌ ನಡೆಯಲಿದೆ ಎಂದು ಹೇಳಲಾಗಿದೆ.

Leave a Reply

Your email address will not be published.