ಶಾಗೆ ತಾಕತ್ತಿದ್ದರೆ ಇಡೀ ದೇಶದಲ್ಲಿ ನಡೆಯುತ್ತಿರೋ ಗೋಹತ್ಯೆ ತಡೆಯಲಿ : ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡುವುದಾಗಿ ಹೇಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಗೆ ಗೋವುಗಳ ಬಗ್ಗೆ ಅಷ್ಟೊಂದು ಪ್ರೀತಿಯಿದ್ದರೆ ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಲಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಶೇ.14ರಷ್ಟು ಗೋಮಾಂಸ ರಫ್ತಾಗುತ್ತಿದೆ. ಇದರಿಂದಾಗಿ 2015-16ನೇ ಸಾಲಿನಲ್ಲಿ 26,682 ಕೋಟಿ ಆದಾಯ ಕೇಂದ್ರಕ್ಕೆ ಬಂದಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಗೋಮಾಂಸ ಹೆಚ್ಚು ರಫ್ತಾಗುತ್ತಿದೆ. ಉತ್ತರ ಪ್ರದೇಶದ ಕಂಪನಿಗಳಲ್ಲಿ ಬಿಜೆಪಿ ನಾಯಕರೇ ಪಾಲುದಾರರಾಗಿರುವ ಆರೋಪ ಕೇಳಿಬಂದಿದೆ. ತಾಕತ್ತಿದ್ದರೆ ಇದನ್ನು ಮೊದಲು ತಡೆಯಲಿ ಎಂದಿದ್ದಾರೆ.
ಕೇವಲ ಗೋಹತ್ಯೆ ಮಾತ್ರವಲ್ಲ. ಎಲ್ಲಾ ಪ್ರಾಣಿಗಳ ಹತ್ಯೆ ತಡೆಯಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com