ಹನುಮ ಜಯಂತಿಗೆ ಶುಭ ಕೋರಿದ CM : ಟಾಂಗ್‌ ಕೊಟ್ಟ ಬಿಜೆಪಿ ಹೇಳಿದ್ದೇನು ?

ಬೆಂಗಳೂರು : ಇಂದು ಹನುಮ ಜಯಂತಿಯಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವಿಟರ್ ಮೂಲಕ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಷಯ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಷಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶಿರ್ವಾದ ನಾಡಿನ ಎಲ್ಲಾ ಜನರ ಮೇಲಿರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಸಿಎಂ ಅವರ ಈ ಟ್ವೀಟ್‌ಗೆ ಕರ್ನಾಟಕ ಬಿಜೆಪಿ ರೀ ಟ್ವೀಟ್ ಮಾಡಿದ್ದು, ಟ್ವಿಟರ್‌ನಲ್ಲಿ ಶುಭಾಷಯ ಕೋರುವುದು ಹಾಗಿರಲಿ ಸರ್‌, ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲಾ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು ಈಗ ಮಾತ್ರ ಟ್ವಿಟರ್‌ನಲ್ಲಿ ಶುಭಾಷಯ ಕೋರುತ್ತಿದ್ದೀರಲ್ಲ ನಿಮಗೆ ಏನೂ ಅನ್ನಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com