ಈಶ್ವರಪ್ಪ ಮುಖ ನೋಡಿದ್ರೆ 3 ವೋಟ್‌ ಬರಲ್ಲ ಎಂದವ್ರಿಗೆ ಟಿಕೆಟ್ ಕೊಡ್ತಿದ್ದಾರೆ : BJP ನಾಯಕ !

ಬೆಂಗಳೂರು : ಯಾರು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಸಂಬಂಧ ಕಲ್ಪಿಸಿ ಬೈದಿದ್ದರೋ ಅಂತಹವರಿಗೆ ಸೀಟು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ನನ್ನ ತಂಗಿ ಸಮಾನರು. ಭಾರತಿ ಶೆಟ್ಟಿ ನನ್ನ ತಾಯಿ ಸಮಾನ. ಆದರೆ ಇವರಿಗೂ ಬಿಜೆಪಿ ನಾಯಕರಿಗೂ ಸಂಬಂಧ ಕಟ್ಟಿ ಮಾತನಾಡುತ್ತಾರೆ. ಆದರೆ ಅಂತಹವರಿಗೂ ಟಿಕೆಟ್‌ ನೀಡುತ್ತಾರೆ. ಈಶ್ವರಪ್ಪ ಮುಖ ನೋಡಿದ್ರೆ ಮೂರು ಓಟು ಬರಲ್ಲ ಅಂದ ಗೋಪಾಲಕೃಷ್ಣ ಅವರಿಗೂ ಸೀಟು ಕೊಡುತ್ತಾರೆ. ಇದು ನನಗೆ ಬೇಸರ ತಂದಿರುವುದಾಗಿ ಹೇಳಿದ್ದಾರೆ.

ನಾನು ಸತ್ತ ದಿನ ಮಾಜಿ ಸಚಿವ ಹರತಾಳು ಹಾಲಪ್ಪ ನಿಧನ ಎಂದು ಬರೆಯುತ್ತೀರಿ. ಅಷ್ಟೇ . ಇಷ್ಟೇ ಜೀವನ. ಇನ್ನೇನು ಹೇಳಲು ಸಾಧ್ಯವಿಲ್ಲ. ಈ ಬಾರಿ ಟಿಕೆಟ್‌ ಸಿಗಬಹುದೆಂಬ ಭರವಸೆ ಇದೆ ಅಷ್ಟೇ. ಸಿಕ್ಕರೆ ಸಂತೋಷ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com