ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳಿಗೆ ಟಿಕೆಟ್ ನೀಡಲ್ಲ : ಅಮಿತ್ ಶಾ

ಮೈಸೂರು : ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳಿಗೆ ಬಿಜೆಪಿಯಿಂದ ಟಿಕೆಟ್‌ ನೀಡುವುದಿಲ್ಲ ಎಂದು ಅಮಿತ್ ಶಾ ಖಡಕ್‌ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯ ಬಿಜೆಪಿಯ ಶಾಸಕರಿಗೆ ಅಮಿತ್ ಶಾ ಚುರುಕು ಮುಟ್ಟಿಸಿದ್ದು, ಇನ್ನುಮುಂದೆ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಬೇಡ ಎಂದು ಅಮಿತ್ ಶಾ ಫರ್ಮಾನ್ ಹೊರಡಿಸಿದ್ದಾರೆ. ಅಲ್ಲದೆ ಬಿಜೆಪಿಯ ಅನೇಕರು ಬೇರೆ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಈ ಬಾರಿ ಟಿಕೆಟ್ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ಗೆದ್ದು ತೋರಿಸಿ ಎಂದು ಅಮಿತ್ ಶಾ ಸ್ವಪಕ್ಷೀಯ ಶಾಸಕರಿಗೆ ಸವಾಲು ಹಾಕಿದ್ದು, ಪ್ರತಿಪಕ್ಷಗಳ ಅಭ್ಯರ್ಥಿ ಅನುಕೂಲಕ್ಕೆ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಇದಕ್ಕಾಗಿ ಪಕ್ಷದ ಹಿತಾಸಕ್ತಿ, ಘನತೆ ಬಲಿ ಕೊಡುವುದಿಲ್ಲ ಎಂದಿದ್ದು, ಅಮಿತ್ ಷಾ ಆದೇಶದಿಂದ ಬಿಜೆಪಿಯ ಎಂ. ಕೃಷ್ಣಪ್ಪ, ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್ ಮುಂತಾದವರಿಗೆ ಸಂಕಷ್ಟ ಎದುರಾಗಿದೆ.
ಸಂಸದರಾದ ಪಿ.ಸಿ. ಮೋಹನ್, ಕೇಂದ್ರ ಸಚಿವರಾದ ಅನಂತ್ ಕುಮಾರ್ ಮುಂತಾದವರಿಗೂ ಅಮಿತ್ ಶಾ ಫರ್ಮಾನು ಇಕ್ಕಟ್ಟಿಗೆ ಸಿಲುಕಿಸಿದೆ.

Leave a Reply

Your email address will not be published.